(www.vknews. in) ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯ ಪೆರ್ನೆ ಇದರ ವತಿಯಿಂದ ಕಲ್ಲಡ್ಕ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟದ ಉದ್ಘಾಟನೆ ನಡೆಯಿತು
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ವಿಧ್ಯಾರ್ಥಿಗಳು ನಿವೃತ್ತ ಹನ್ನೊಂದು ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಶಿಕ್ಷಕರಾದ ಐತಪ್ಪ ಸೇಣವ ,ಹೆಚ್ ಶಿವರಾಮ್ ಭಟ್, ದಯಾನಂದ. ರೈ ಯನ್ ,ತಾರಾ ನಾಥಶೆಟ್ಟಿ ಹೆಚ್,ಸುಧಾಕರ್ ರೈ ಎಂ ಎಸ್, ವಿ ಗೋಪಾಲಕೃಷ್ಣ ಭಟ್ ,ಪ್ರಹ್ಲಾದ್ ಶೆಟ್ಟಿ ,ಕರಿಯಪ್ಪ ರೈ.ಸದಾಶಿವ ಪೂಜಾರಿ, ಚಂದ್ರಹಾಸ ರೈ, ಕೆ ಮೋಹನ್ ದಾಸ್ ಭಟ್. ಇವರುಗಳು ಸನ್ಮಾನಿತರಾದರು.
ಶಾಲಾ ಸಂಚಾಲಕರಾದ ಹರೀಶ್ ಭಂಡಾರಿ ಪ್ರಾಂಶುಪಾಲರಾದ ಶೇಖರ್ ರೈ, ಹಾಗೂ ಶಿಕ್ಷಕ ರಕ್ಷಕರ ಸಂಘದ ಅಧ್ಯಕ್ಷರು ಮತ್ತು HM ಸತ್ಯ ನಾರಾಯಣ ರೈ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷರು ಮ್ಯಾಕ್ಸಿಂ ಲೋಬೊ ಮಾತನಾಡಿ ಶಿಕ್ಷಕರನ್ನು ಉದ್ದೇಶಿಸಿ ನಮ್ಮ ಪ್ರೌಢಶಾಲೆಗೆ ಇವತ್ತಿಗೆ 40 ವರ್ಷವಾಯಿತು.ಮೂರು ತಿಂಗಳ ಹಿಂದೆ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಕಟ್ಟಿ 770 ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಕ್ಕೆ ಇಟ್ಟುಕೊಂಡು ಈ ಒಂದು ಕಾರ್ಯಕ್ರಮವನ್ನು ಮಾಡಲು ಎಲ್ಲಾ ರೀತಿಯ ಸಹಕಾರವನ್ನು ನೀಡಿದ ಪ್ರಾಂಶುಪಾಲರನ್ನು ಉದ್ದೇಶಿಸಿ ಇಂತಹ ಶಿಕ್ಷಕರು ಶಾಲೆಯಲ್ಲಿದ್ದರೆ ಇನ್ನಷ್ಟು ಕಾರ್ಯಕ್ರಮಗಳನ್ನು ಹಳೆ ವಿದ್ಯಾರ್ಥಿಗಳ ಸಂಘದ ಮೂಲಕ ಮಾಡಲು ಸಹಾಯವಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳ ಜೊತೆಗೆ ಕೆಲವೊಂದು ಯೋಜನೆಗಳನ್ನು ಶಾಲೆಯ ಹಾಗೂ ಶಾಲೆಯಲ್ಲಿ ಕಲಿಯುತ್ತಿರುವ ಬಡ ಮಕ್ಕಳ ಒಳಿತಿಗಾಗಿ ಹಮ್ಮಿಕೊಂಡಿದ್ದೇವೆ ಅದರ ಬಗ್ಗೆ ಇನ್ನು ಗಮನಹರಿಸಬೇಕಾಗಿದೆ ಎಂದರು.
ಉಪಾಧ್ಯಕ್ಷೆ ಶ್ರೀ.ಸುಚಿತ್ರ ಅವರು ಸ್ವಾಗತವನ್ನು ಮಾಡಿದರು.ಗೌತಮ್ ಅವರು ಸನ್ಮಾನ ಪತ್ರವನ್ನು ವಾಚಿಸಿದರು. ಹಾಗೂ ಶ್ರೀ ಆಯಿಷಾ ಪಿ ಇವರು ಧನ್ಯವಾದ ಮಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.