ಮಂಗಳೂರು (www.vknews.com): ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಬಾಲಕಿಯರ), ಪದವಿ ಪೂರ್ವ ವಸತಿ ಕಾಲೇಜು (ಬಾಲಕಿಯರ) ಹಾಗೂ ಮುಸ್ಲಿಂ ವಸತಿ ಶಾಲೆ (ಬಾಲಕರ) ಗಳ 6, 7, 8, 9 ನೇ ತರಗತಿ ಹಾಗೂ ಪ್ರಥಮ ಪಿಯುಸಿ ವಿಜ್ಞಾನ ವಿಭಾಗ ಪ್ರವೇಶಕ್ಕೆ ಅರ್ಜಿ ಅಹ್ವಾನಿಸಲಾಗಿದೆ.
ಅರ್ಜಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಕಚೇರಿ, ಸಂಬಂಧಪಟ್ಟ ವಸತಿ ಶಾಲೆಗಳು, ಕಾಲೇಜು, ಮೌಲಾನ ಅಜಾದ್ ಮಾದರಿ ಶಾಲೆಗಳು ಹಾಗೂ ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ಕಚೇರಿಗೆ ಆಗಸ್ಟ್ 10 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಸತಿ ಶಾಲೆಗಳನ್ನು ಸಂಪರ್ಕಿಸಬಹುದು. ದೇರಳಕಟ್ಟೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಬಾಲಕಿಯರ) 7975562168/9449080150, ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು 8970707858, ಮುಸ್ಲಿಂ ವಸತಿ ಶಾಲೆ (ಬಾಲಕರ) 9449311924
ಮೌಲಾನಾ ಆಜಾದ್ ಮಾದರಿ ಶಾಲೆಗಳು; ಮಂಗಳೂರು ತಾಲ್ಲೂಕು: ಮಂಜನಾಡಿ-8618235367, ಕಲ್ಲಾಪು ಪಟ್ಲ-9110878280, ಕುದ್ರೋಳಿ & ಗುರುಕಂಬಳ ಕಿನ್ನಿಕಂಬಳ-8970707858, ಉಳಾಯಿಬೆಟ್ಟು-9449080150,
ಬಂಟ್ವಾಳ ತಾಲ್ಲೂಕು: ಪುದು ಪರಂಗಿಪೇಟೆ- 9481149135, ಅರಳ ಮೂಲರಪಟ್ನ – 9845952483,
ಪುತ್ತೂರು ತಾಲೂಕು: 7829892702 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.