ಜೆರುಸಲೆಮ್(ವಿಶ್ವಕನ್ನಡಿಗ ನ್ಯೂಸ್): ಇಸ್ರೇಲ್ ನ ಪ್ರಮುಖ ಜೈವಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಮಾರಕ ರೋರ ಕೊರೊನಾವೈರಸನ್ನು ಮಾನವನ ದೇಹದ ಒಳಗಡೆ ತಟಸ್ಥಗೊಳಿಸಬಲ್ಲ ಔಷಧಿಯನ್ನು ಕಂಡು ಹಿಡಿದುರುವುದಾಗಿ ಇಸ್ರೇಲ್ ರಕ್ಷಣಾ ಸಚಿವರು ಹೇಳಿದ್ದಾರೆ.
ಇಸ್ರೇಲ್ ಇನ್ಸ್ಟಿಟ್ಯೂಟ್ ಫೋರ್ ಬಯೋಲಜುಕಲ್ ರಿಸರ್ಚ್(ಐಐಬಿಆರ್) ನಲ್ಲಿ ಅಫಿವೃದ್ದಿಪಡಿಸಿದ ‘ಮೊನೊಕ್ಲೊನಲ್ ನ್ಯೂಟ್ರಾಲೈಸಿಂಗ್ಲಆಂಟಿಬಾಡಿ’ ಮಾನವನ ದೇಹದಲ್ಲಿ ಕೊರೊನಾ ವೈರಸನ್ನು ತಟಸ್ಥಗೊಳಿಸಲು ಸಹಾಯವಾಗುತ್ತದೆ ಎಂದು ರಕ್ಷಣಾ ಸಚಿವ ನಫ್ತಾಲಿ ಬೆನೆಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಚಿವರು ಪ್ರಯೋಗಾಲಯಕ್ಕೆ ಬೇಟಿ ನೀಡಿ ವಿಜ್ಞಾನಿಗಳ ಸಾಧನೆಗಳನ್ನು ಗುರುತಿಸಿದ್ದು, ಈ ಔಷಧವು ಕೊರೊನಾವೈರಸ್ ನ ವಿರುದ್ಧ ಹೋರಾಡುತ್ತಿರುವ ಇಡೀ ವಿಶ್ವಕ್ಕೆ ಒಂದು ಮಹತ್ವದ ಬೆಳವಣಿಗೆಯಾಗಲಿದೆ ಎಂದರು.
‘ಇಸ್ರೇಲ್’ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿ ಸುಮಾರು 16246 ಸೋಂಕುಗಳೊಂದಿಗೆ 235 ಸಾವುಗಳು ವರದಿಯಾದ ದೇಶವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.