(www.vknews.com) : ಎರಡು ದಿನಗಳ ಹಿಂದೆ ಜೆಪಿ ನಗರದಲ್ಲಿ ಒಂದು ಘಟನೆ ನಡೆಯಿತು ಬೆಳಗಿನ ಝಾವ ಒಬ್ಬ ವ್ಯಕ್ತಿ ತನ್ನ ಸೈಕಲ್ ಮೇಲೆ ಮೊಬೈಲಿನಲ್ಲಿ ಮಾತಾಡಿಕೊಂಡು ಹೋಗುತ್ತಿದ್ದರು. ಬಿಳಿ ಆಕ್ಟಿವಾದಲ್ಲಿ ಒಬ್ಬ ಬಂದು ಅವರ ಮೊಬೈಲನ್ನು ಕಿತ್ತುಕೊಂಡು ಹೊರಟು ಹೋದನು. ಪ್ರಪಂಚ ಯಾವ ದಿಕ್ಕಿನಲ್ಲಿ ಸಾಗುತ್ತಿದೆ..! ನೋಡಿ..!
ಖಲೀಫ ಹಜ್ರತ್ ಉಮರ್ ಕಾಲದಲ್ಲಿ ಒಬ್ಬರು ತನ್ನ ಭೂಮಿಯನ್ನು ಮಾರಾಟ ಮಾಡಿದರು. ಅದನ್ನು ಖರೀದಿಸಿದ ವ್ಯಕ್ತಿಗೆ ಆ ಭೂಮಿಯಲ್ಲಿ ಖಜಾನೆ ಸಿಕ್ಕಿತು. ತಕ್ಷಣ ಅದನ್ನು ತೆಗೆದುಕೊಂಡು ಭೂಮಿಯ ಮೊದಲ ಮಾಲೀಕನ ಬಳಿ ಬಂದು, ನಾನು ನಿಮ್ಮ ಹತ್ತಿರ ಭೂಮಿ ಖರೀದಿಸಿದ್ದೆ, ಭೂಮಿಯ ಹಣ ಪಾವತಿಸಿದ್ದೆ ಹೊರತು ಈ ಖಜಾನೆಯದ್ದಲ್ಲ. ಈ ಖಜಾನೆ ನಿಮ್ಮ ಪಾಲಿಗೆ ಸೇರಬೇಕಾದದ್ದು, ದಯವಿಟ್ಟು ಸ್ವೀಕರಿಸಿ ಎಂದರು. ಆಗ ಆ ಮೊದಲ ಮಾಲೀಕ ಹೇಳಿದರು – ನಾನು ನಿಮಗೆ ಭೂಮಿಯನ್ನು ಮಾರಿಬಿಟ್ಟಿದ್ದೇನೆ. ಈ ಖಜಾನೆ ನಿಮ್ಮ ಅದೃಷ್ಟದ್ದು. ಇದರ ಮೇಲೆ ನನ್ನ ಹಕ್ಕಿಲ್ಲ. ನನಗೆ ಬೇಡ ನೀವೇ ಇಟ್ಟುಕೊಳ್ಳಿ. ಆದರೆ ಇಬ್ಬರೂ ತಯಾರಿಲ್ಲ. ತಮ್ಮ ಮಾತಿಗೆ ಬದ್ಧವಾಗಿದ್ದಾರೆ. ವಿಷಯ ಖಲೀಫ ಉಮರ್ ರವರಿಗೆ ತಿಳಿಸಲಾಯಿತು.ಅವರು ನ್ಯಾಯ ಇತ್ಯರ್ಥ ಮಾಡಿದರು. ಇಬ್ಬರ ಮಕ್ಕಳು ಮದುವೆಯ ವಯಸ್ಸಿಗೆ ಬಂದಿದ್ದರು. ನಿಮ್ಮ ಮಗಳಿಗೆ ಅವರ ಮಗನಿಗೆ ಕೊಟ್ಟು ಮದುವೆ ಮಾಡಿ. ಎಂದರು. ಹಾಗೆ ಆಯಿತು ಖಜಾನೆ ಯುವ ವಧುವರರಿಗೆ ದೊರೆತಂತಾಯಿತು.
ಇಂದು ಎಲ್ಲಿ ಮಾಯವಾಗಿ ಹೋಯಿತು ಜನರ ನಿಯ್ಯತ್ತು. ಕರೋನ ಬಂದು ಜನರು ಸಾಯುತ್ತಿದ್ದರೂ, ಕಣ್ಮುಂದೆ ಎಲ್ಲ ಅನಾಹುತಗಳು ನಡೆಯುತ್ತಿದ್ದರೂ, ಒಂದಿಲ್ಲ ಒಂದು ದಿನ ನಾವು ಸಾಯಬೇಕು ಎಂದು ಗೊತ್ತಿದ್ದರೂ ಜನರಿಗೆ ಬುದ್ಧಿ ಮಾತ್ರ ಬರುತ್ತಿಲ್ಲ. ಇರಲಿ.
ಆ ಘಟನೆಯಲ್ಲಿ ಕೇವಲ ಮೊಬೈಲ್ ಮಾತ್ರ ಕಳ್ಳತನವಾಗಿಲ್ಲ, ಬಹಳ ಬೇಸರದಿಂದ ಹೇಳಬೇಕಾಗುತ್ತದೆ, ಮನುಷ್ಯತ್ವ ಕಳ್ಳತನವಾಗಿ ಹೋಗಿದೆ. ಸದ್ಯಕ್ಕೆ ನಾವೇನು ಮಾಡಬೇಕು ಎಂದರೆ ಜಾಗೃತೆಯಿಂದ ಓಡಾಡಬೇಕು. ದೇಶದಲ್ಲಿ ಬಡವರು ಮಧ್ಯಮವರ್ಗದವರು ತಮ್ಮ ಕೆಲಸಗಳನ್ನು ಕಳೆದುಕೊಂಡು ಪರದಾಡುತ್ತಿದ್ದಾರೆ. ಕರೋನ ಲಾಕ್ ಡೌನ್ ಹಂತಗಳಲ್ಲಿ ಕ್ರೈಮ್ ರೇಟ್ ಹೆಚ್ಚಾಗುವುದು ಆಶ್ಚರ್ಯವೇನಲ್ಲ. ತಮ್ಮ ಸುತ್ತಮುತ್ತಲ ಆಗುಹೋಗುಗಳ ಬಗ್ಗೆ ನಿಗಾ ಇಡಿ. ಮುಂಜಾನೆ ವಾಯು ವಿಹಾರಕ್ಕೆ ಹೋಗುವಾಗ ಒಬ್ಬಂಟಿಯಾಗಿ ಹೋಗದಿರುವುದು ಒಳಿತು. ಮೇನ್ ರೋಡ್ ಗಳಲ್ಲಿ ಓಡಾಡಿ. ಅಡ್ಡರಸ್ತೆಗಲ್ಲಿ ಸಂದಿಗೊಂದಿಗಳಲ್ಲಿ ಹೋಗಬೇಡಿ. ಮೊಬೈಲುಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಮಹಿಳೆಯರು ಒಡವೆಗಳ ಪ್ರದರ್ಶನ ಮಾಡಬೇಡಿ. ಭಾರಿ ಬೆಲೆಬಾಳುವಂತಹ ಗಡಿಯಾರಗಳು, ಚಿನ್ನದ ಚೈನುಗಳು, ಬ್ರೇಸ್ಲೇಟ್ ಗಳನ್ನು ಹಾಕುವುದನ್ನು ನಿಲ್ಲಿಸಿ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ಪರ್ಸುಗಳಲ್ಲಿ ವ್ಯಾಲೇಟುಗಳಲ್ಲಿ ಇಟ್ಟುಕೊಂಡು ಓಡಾಡುವುದನ್ನು ಬಿಡಿ. ಅಗತ್ಯಕ್ಕಿಂತ ಹೆಚ್ಚು ಹಣ ಇಡಬೇಡಿ. ಮಕ್ಕಳ ಮೇಲೆ ನಿಗಾ ಇರಲಿ. ಡೋರ್ ಬೆಲ್ ಒತ್ತಿದ ತಕ್ಷಣ ಬಾಗಿಲು ತೆಗೆಯಲು ಹೋಗಬೇಡಿ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ. ನಿಮ್ಮ ವಾಹನಗಳ ಮೇಲೆ ಕಣ್ಣಿಡಿ. ಬೇಜವಾಬ್ದಾರಿತನ ಬೇಡ. ನಮ್ಮ ಸುರಕ್ಷತೆ ಆದಷ್ಟು ನಾವೇ ಮಾಡಿಕೊಂಡರೆ ಒಳಿತು.
ಮೊದಲು ಮನುಷ್ಯರಾಗೋಣ. ನಂತರ ಎಲ್ಲ .
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.