(www.vknews.com) : ನಮ್ಮ ಬಾಲ್ಯದಲ್ಲಿ ಶಾಲೆಗೆ ಹೋಗುವ ದಿನಗಳಲ್ಲಿ ಗೋಲಿ ಸೋಡಾ ಅಂದರೆ ಬಾರಿ ಫೇಮಸ್. ಹೆಬ್ಬರಳನ್ನು ಬಾಟಲಿಯ ಒಳಕ್ಕೆ ತುರುಕಿ ಗಟ್ಟಿಯಾಗಿ ಅದಮಿ ಗೋಲಿ ಹೊಡೆದು ಕುಡಿಯುವುದೆಂದರೆ ಎಲ್ಲಿಲ್ಲದ ಖುಷಿ. ರಜಾ ದಿನಗಳಲ್ಲಿ ಸೈಕಲ್ ಹೊಡೆದು ಆಯಾಸವಾದಾಗ ಗೋಲಿಸೋಡ ಕುಡಿಯುತ್ತಿದ್ದೆವು.
ದೇರಳಕಟ್ಟೆಯ ಬದ್ರಿಯಾ ಮಸೀದಿ ಕಟ್ಟಡದಲ್ಲಿ ಗೋಪಾಲಣ್ಣ ಎಂಬವರು ಗೋಲಿ ಸೋಡಾ ತಯಾರಿಸಿ ಅಂಗಡಿಗಳಿಗೆ ತನ್ನ ಸೈಕಲ್ನಲ್ಲಿ ಕಟ್ಟಿ ವಿತರಿಸುತ್ತಿದ್ದರು. ಗೋಲಿಸೋಡ ತಯಾರಿಸಲು ಗೋಪಾಲಣ್ಣನಿಗೆ ನನ್ನ ಗೆಳೆಯರು ಅವರ ಅಂಗಡಿ ಪಕ್ಕದಲ್ಲಿರುವ ಬೋರ್ವೆಲ್ ಹೊಡೆದು ಕೊಡಪಾಣದಲ್ಲಿ ನೀರು ತುಂಬಿಸಿ ಕೊಡುತ್ತಿದ್ದರು. ಅಂದು ತಲಾ ಒಂದು ಕೊಡಪಾಣ ನೀರಿಗೆ 25 ಪೈಸೆಯಂತೆ ಕೊಡುತ್ತಿದ್ದರು. ಕೆಲವೊಮ್ಮೆ ಕುಡಿಯಲು ಗೋಲಿಸೋಡ ಕೂಡ ಕೊಡುತ್ತಿದರು. ಚಲಾಕಿ ಗೆಳೆಯರು ಕೆಲವೊಮ್ಮೆ ಗೋಲಿಸೋಡದ ಗ್ಯಾಸ್ ತೆಗೆದು ” ಗೋಪಾಲಣ್ಣ ಇದ್ರೆ ಗ್ಯಾಸ್ ಪೋಯಿರ್ಲೆ” ಎಂದು ಹೇಳುವಾಗ ಅವರು ” ಅಪೆಂಗ್ ಕುಡಿಕೊರ್ಲ” ಎನ್ನುತ್ತಿದ್ದರು.
ಅಂದು ಗೋಲಿ ಸೊಡಾದಲ್ಲಿ” ರಸ್ನಾ, ಚಪ್ಪೆಸೋಡಾ, ಜಿಂಜರ್ ಸೋಡ ಎಂಬ ವೆರೈಟಿಗಳಿದ್ದವು. ಕೇವಲ ಒಂದು ರೂಪಾಯಿಗೆ ಸಿಗುತ್ತಿತ್ತು. ಕಾಲ ಕ್ರಮೇಣ ಅಸಾರ್, ಸಿಕ್ಸರ್, ಜಾಯ್, ಗಳೆಂಬ ಹೆಸರಲ್ಲಿ ಮಾರುಕಟ್ಟೆಯಲ್ಲಿ ಸಾಫ್ಟ್ ಡ್ರಿಂಕ್ಸ್ ಗಳು ಲಗ್ಗೆ ಯಿಡಲು ಪ್ರಾರಂಬಿಸಿದ್ದರಿಂದ ಗೋಲಿಸೋಡಾದ ಜನಪ್ರಿಯತೆ ಕುಸಿಯತೊಡಗಿತು.
ಇದೀಗ ಹೊಸ ಮೋಡಲಲ್ಲಿ ಮತ್ತೆ ಗೋಲಿಸೋಡ ಮಾರುಕಟ್ಟೆಗೆ ಬಂದಿದೆ.
ಮಿಫ್ತಾಹ್ ಅರಸ್ತಾನ ಮಲಾರ್ ರವರ ಮಾಲಕತ್ವ ದಲ್ಲಿ ಗೋಲಿಸೋಡ ಮತ್ತೆ ಮಾರುಕಟ್ಟೆಗೆ ಬಂದಿದೆ. ಆರೆಂಜ್, ಲೆಮನ್, ಜಿಂಜರ್, ಪೈನಾಪಲ್, ಕೋಲಾಗಳೆಂಬ ಐದು ಫ್ಲೇವರ್ ಗಳಲ್ಲಿ ಗೋಲಿಸೋಡ ಲಭ್ಯವಿದೆ.
ಇಂದು ದೇರಳಕಟ್ಟೆಯ ಕಣಚೂರ ಆಸ್ಪತ್ರೆ ಪಕ್ಕದಲ್ಲಿರುವ ಗೆಳೆಯ ಅಲೀಯವರ “ಅಲೀಸ್ ಕಿಚನ್” ರೆಸ್ಟೋರೆಂಟ್ ನಲ್ಲಿ ಗೋಲಿಸೋಡ ಕಂಡಾಗ ಗತ ಕಾಲದ ನೆನಪಾಯಿತು.
“ಅಲೀಸ್ ಕಿಚನ್”ಗೆ ಒಮ್ಮೆ ಭೇಟಿ ಕೊಟ್ಟು ಟೇಸ್ಟ್ ನೋಡಿ.!!
✍️ ಡಿ.ಎ .ಅಶ್ರಫ್ ದೇರಳಕಟ್ಟೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.