ಮಂಗಳೂರು (www.vknews.com) : ಭವಿಷ್ಯದಲ್ಲಿಉದ್ಯೋಗಕ್ಕೆ ಹಲವಾರು ಅವಕಾ±ಗಳಿರುವ ರೋಬೊಟಿಕ್ಸ್ಆ್ಯಂಡ್ ಮಿಷನ್ ಲರ್ನಿಂಗ್ನಕುರಿತುಉಚಿತಅಂತರಾಷ್ಟ್ರೀಯ ವೆಬಿನಾರ್ವುಜೂನ್ 26 ರಂದು ನಡೆಯಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಗರದ ಪ್ರತಿಷ್ಟಿತ ಶ್ರೀನಿವಾಸ ವಿಶ್ವವಿದ್ಯಾಲಯವು ಈ ವಿಭಿನ್ನಅಂತರಾಷ್ಟ್ರೀಯ ವೆಬ್ನಾರ್ನ್ನುಆಯೋಜಿಸುತ್ತಿದೆ. ಝೂಮ್ಆ್ಯಪ್ ಮೂಲಕ ವಿದ್ಯಾರ್ಥಿಗಳು ಈ ಉಚಿತಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದು.
ಹೆಸರಾಂತರೋಬೊಟಿಕ್ಸ್ ವಿಜ್ಞಾನಿ ಕನ್ನಡಿಗ ಹರ್ಷಕಿಕ್ಕೇರಿಅವರು ವೆಬಿನಾರ್ ನಡೆಸಿಕೊಡಲಿದ್ದಾರೆ. ರೋಬೊಟಿಕ್ಸ್ತಂತ್ರಜ್ಞಾನದಲ್ಲಿ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಹರ್ಷಕಿಕ್ಕೇರಿಅವರು ಮಹಾನ್ ಸಾಧನೆಯನ್ನು ಮಾಡಿದ್ದಾರೆ. ಮಾತ್ರವಲ್ಲದೆಅವರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರುಕೂಡ ಪ್ರಶಂಶಿಸಿದ್ದಾರೆÉ. ಪ್ರಸ್ತುತ ಸಿಂಗಾಪುರದ ಹೊಲೊಸೂಟ್ ಸಂಸ್ಥೆಯ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿರುವ ಹರ್ಷಕಿಕ್ಕೇರಿಅವರು ವೆಬಿನಾರ್ನಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆಅನುಕೂಲಕರವಾದ ಮಾಹಿತಿಯನ್ನುಒದಗಿಸಲಿದ್ದಾರೆ.
ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಕಲಿಕೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವೆಬಿನಾರ್ ಹೆಚ್ಚು ಉಪಯುಕ್ತವಾಗಲಿದೆ. ಜೂನ್ 26ರಂದು ಸಂಜೆ 6.30ಕ್ಕೆ ವೆಬಿನಾರ್ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಜೂನ್ 26 ರ ಸಂಜೆ 4 ಗಂಟೆಯೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಶ್ರೀನಿವಾಸ ವಿಶ್ವವಿದ್ಯಾಲಯದ ವತಿಯಿಂದ ವಿಶೇಷ ಉಡುಗೊರೆಯನ್ನು ನೀಡಲಾಗುತ್ತದೆ. 1 ಗಂಟೆಗಳ ಕಾಲ ನಡೆಯಲಿರುವ ವೆಬಿನಾರ್ನಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗಾವಕಾಶಗಳ ಕುರಿತುಉಪಯುಕ್ತ ಮಾಹಿತಿಯನ್ನು ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಪೆÇ್ರೀ. ಅಂಕಿತ್ಜೆ. ಡೆಪ್ಯೂಟಿರಿಜಿಸ್ಟ್ರಾರ್ ಶ್ರೀನಿವಾಸ ವಿಶ್ವಿದ್ಯಾಲಯದ +91 9741141433
Join Zoom Meeting
https://us02web.zoom.us/j/84163814610?pwd=UjFKRnJ6aUdieHh6RG1jdnVnZ0ZWdz09
Meeting ID: 841 6381 4610
Password: 632206
Registration form link:
https://forms.gle/JebSD2ZTm4hEBRnA6
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.