(www.vknews.com) : ತುಂಬೆ ಸುಲ್ತಾನ್, ಕೊಡುಗೈ ದಾನಿ, ಸರಳ ಸಜ್ಜನಿಕೆಯ ಮಹಾನ್ ವ್ಯಕ್ತಿತ್ವದ ಒಡೆಯ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ರವರ ಮರಣ ಸಮುದಾಯಕ್ಕೆ ತುಂಬಲಾಗದ ನಷ್ಟ
ಅಪರೂಪದ ವ್ಯಕ್ತಿತ್ವ ಅವರು ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಸದ್ಗುಣ ಸಂಪನ್ನರು. ತುಂಬೆ ಎಂಬ ಊರಿನ ಸರ್ವತೋಮುಖ ಅಭಿವೃದ್ಧಿಗೂ ಆ ಊರಿನ ಖ್ಯಾತಿ ಅಂತರಾಷ್ಟ್ರೀಯ ಮಟ್ಟಕ್ಕೇರಲೂ ಅವರು ಕಾರಣರಾದರು ಎಂದರೂ ತಪ್ಪಾಗಲಾರದು. ತುಂಬೆ ಮದ್ರಸದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಸ್ವದರ್ ಮುಅಲ್ಲಿಂ ಆಗಿದ್ದ ನಾನು ಅಲ್ಲಿಂದ ವಿರಮಿಸುವಾಗ “ಮುಂದೆ ಏನು ಮಾಡುತ್ತೀರಿ?” ಎಂಬ ಪ್ರಶ್ನೆಯನ್ನು ನನ್ನ ಮುಂದಿಟ್ಟರು ಮಾತ್ರವಲ್ಲ ಪರಿಹಾರವನ್ನೂ ಅವರೇ ಹೇಳಿದರು.
ವಿದೇಶಕ್ಕೆ ಹೋಗುವ ಅವರ ಮಾತನ್ನು ನಾನು ಅರೆಮನಸ್ಸಿನಿಂದ ಒಪ್ಪಿದೆ. ಅದನ್ನು ಮನಗಂಡ ಅವರು ಸಂದರ್ಶನ ವೀಸಾದಲ್ಲಿ ಹೋಗುವಂತೆಯು ಸರಿಯಾಗುವುದಾದರೆ ಮುಂದುವರಿಯುವಂತೆ ಸೂಚಿಸಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನೂ ಮಾಡಿದರು. ಅಜ್ಮಾನಿನಲ್ಲಿ ಒಳ್ಳೆಯ ಕೆಲಸವನ್ನೂ ದೊರಕಿಸಿ ಕೊಟ್ಟರು. ಮುಂದೆ ಸುಮಾರು 12 ವರ್ಷ ನಾನು ವಿದೇಶದಲ್ಲಿ ದುಡಿದೆ.
ಈ ರೀತಿ ನನ್ನ ಜೀವನದಲ್ಲಿ ದೊಡ್ಡ ತಿರುವಿಗೂ ಅಭಿವೃದ್ಧಿಗೂ ಅವರು ಕಾರಣರಾಗಿದ್ದಾರೆ. ಇದು ನನ್ನೊಬ್ಬನ ಕತೆಯಲ್ಲ ಈ ರೀತಿ ಅದೆಷ್ಟೋ ಜನರು ಉತ್ತುಂಗಕ್ಕೇರಲು ಅವರು ಕಾರಣರಾಗಿದ್ದಾರೆ. ಅದರಲ್ಲಿ ನಾನು ಸಾಮಾನ್ಯರಲ್ಲಿ ಸಾಮಾನ್ಯ.
ಸರ್ವರ ಏಳಿಗೆಯನ್ನೇ ಬಯಸುವ ಅವರದು ಎಂದಿಗೂ ಮರೆಯಲಾಗದ ಅಜೇಯ ವ್ಯಕಿತ್ವ. ಅಲ್ಲಾಹುವನ್ನು ಅವರನ್ನು ಉನ್ನತಿಗೇರಿಸಲಿ ಅವರ ಕಬರನ್ನು ಸ್ವರ್ಗ ಹೂದೋಟ ವನ್ನಾಗಿ ಮಾಡಲಿ. ಅಮೀನ್ ಯಾ ರಬ್ಬಲ್ ಆಲಮೀನ್.
– ಇಬ್ನ್ ಝೈತೂನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.