ಮಕ್ಕಾ(ವಿಶ್ವ ಕನ್ನಡಿಗ ನ್ಯೂಸ್): ಕಳೆದ ಗುರುವಾರ ಮಕ್ಕಾದಲ್ಲಿರುವ ಪವಿತ್ರ ಕ’ಅಬಾ ಶುಚೀಕರಿಸಿದ ಬಳಿಕ ಬಳಸಿದ ಪಾತ್ರೆಗಳನ್ನು-ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದೆ.ಸರಕಾರವು ಪವಿತ್ರ ಮಂದಿರದ ಶುಚಿತ್ವಕ್ಕೆ ನೀಡುವ ಪ್ರಾಧಾನ್ಯತೆಯನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಹಾಗು ದಾಖಲೆಯಾಗಿಟ್ಟುಕೊಳ್ಳಲು ಮತ್ತು ಹಜ್ಜ್-ಉಮ್ರಾ ಯಾತ್ರಾರ್ಥಿಗಳ ಸುರಕ್ಷತೆಗೆ ನೀಡುವ ಮಹತ್ವವನ್ನು ಸಾರುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ಕ’ಅಬಾ ಕವರ್ ಫಾಕ್ಟರಿ,ಮ್ಯೂಸಿಯಂ ಮುಖ್ಯಸ್ಥರಾಗಿರುವ ಅಬ್ದುಲ್ ಹಮೀದ್ ಅಲ್ ಮಾಲಿಕಿ ತಿಳಿಸಿದ್ದಾರೆ.
ಹತ್ತು ಲೀಟರ್ ಸಾಮರ್ಥ್ಯದ ನಾಲ್ಕು ಗ್ಯಾಲನ್ ಬೌಲ್ ನಲ್ಲಿ ನಾಜೂಕಾದ ಹೂದ್ ಎಣ್ಣೆ,ಗುಲಾಬಿ ಸುಗಂಧ ,ಝಂ ಝಂ ನೀರು ಮಿಶ್ರಿತ ಗುಲಾಬಿ ನೀರು,ತಾಯಿಫ್ ಗುಲಾಬಿ ಹಾಗು ಅಂಬರ್ ಮೊದಲಾದುವಗಳನ್ನೊಳಗೊಂಡಿರುತ್ತದೆ.ಬೆಳ್ಳಿಯ ಹಿಡಿ ಇರುವ ನಾಲ್ಕು ಶುಚೀಕರಣ ಬ್ರೂಮ್ ಗಳ ಮೂಲಕ ಕ’ಅಬಾದ ಒಳಭಾಗ ತೊಳೆಯಲಾಗುವುದು.ಇದರೊಂದಿಗೆ ಬೆಳ್ಳಿಯ ಹಿಡಿಯಿರುವ ಮೋಪ್ ಗಳನ್ನೂ ಬಳಸಲಾಗುತ್ತದೆ.ಮರದ ಹಿಡಿ ಇರುವ ನಾಲ್ಕು ತುಂಡು ಬಟ್ಟೆಗಳ ಮೂಲಕ ನೆಲ ಒರೆಸಲಾಗುತ್ತದೆ.ಕೊರೋನಾ ಸಾಂಕ್ರಾಮಿಕ ಕಾರಣದಿಂದ ಸುರಕ್ಷತಾ ಕ್ರಮವಾಗಿ ಕೇವಲ ಡಿಜಿಟಲ್ ಪ್ರದರ್ಶನ ಏರ್ಪಡಿಸಿದ್ದೇವೆ ಎಂದು ಮಾಲಿಕಿ ಹೇಳಿಕೆ ನೀಡಿದ್ದಾರೆ. ಕೃಪೆ:ಸೌದಿ ಗಝೆಟ್
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.