ಗೂನಡ್ಕ(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಮತ್ತು ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಎಸ್ ಎಸ್ ಎಫ್ ಗೂನಡ್ಕ ಇವುಗಳ ಜಂಟಿ ಕಾರ್ಯಾಚರಣೆಗೆ ಸುನ್ನೀ ಸೆಂಟರ್ ಗೂನಡ್ಕ ಇತ್ತೀಚೆಗೆ ಕಾರ್ಯಾರಂಭಿಸಲಾಯಿತು.
ಸುನ್ನೀ ಜಂಇಯ್ಯತ್ತುಲ್ ಉಲಮಾ ಸುಳ್ಯ ತಾಲೂಕು ಅಧ್ಯಕ್ಷ ಅಸ್ಸಯ್ಯಿದ್ ಕುಂಞ್ಞಿಕ್ಕೋಯ ತಂಙಳ್ ಸಅದಿ ಸುಳ್ಯ ಸುನ್ನೀ ಸೆಂಟರ್ ಗೂನಡ್ಕ ವನ್ನು ಉದ್ಘಾಟಿಸಿದರು. ಕಾರ್ಯಕರ್ತರು ಸಮಾಜ ಸೇವೆ ,ಉತ್ತಮ ಗುಣ ನಡತೆ, ದೈನಂದಿನ ಆರಾಧನಾ ಕರ್ಮಗಳು ಮೈಗೂಡಿಸಿಕೊಂಡು ಮಾದರಿಯಾಗಲು ತಂಙಳ್ ಹಿತ ವಚನ ನೀಡಿದರು.
ಸಮಾರಂಭದಲ್ಲಿ ಸ್ಥಳೀಯ ಜಮಾಅತ್ ಅಧ್ಯಕ್ಷ ಹಾಜಿ ಉಮ್ಮರ್ ಪಿ ಎ ಗೂನಡ್ಕ ಅಧ್ಯಕ್ಷತೆ ವಹಿಸಿ ಖತೀಬ್ ಮುಹಮ್ಮದ್ ಅಲಿ ಸಖಾಫಿ ಮಾದಾಪುರ ಉದ್ಘಾಟಿಸಿದರು.ಅಲ್ ಅಮೀನ್ ವೆಲ್ಫೇರ್ ಎಸೋಸಿಯೇಶನ್ ರಿ. ಗೂನಡ್ಕ ಅಧ್ಯಕ್ಷ ಮುಹಮ್ಮದ್ ಕುಂಞ್ಞಿ ಗೂನಡ್ಕ, ಎಸ್ ಎಸ್ ಎಫ್ ದ. ಕ ಜಿಲ್ಲಾ ಈಸ್ಟ್ ಝೋನ್ ಅಧ್ಯಕ್ಷ ಅಯ್ಯೂಬ್ ಮಹ್ಲರಿ,ಸುಳ್ಯ ಡಿವಿಷನ್ ಉಸ್ತುವಾರಿ ಆಬ್ದುರ್ರಹ್ಮಾನ್ ಪದ್ಮುಂಜ,ಬ್ಲಡ್ ಸೈಬೋ ಉಸ್ತುವಾರಿ ಮುಹಮ್ಮದ್ ಫೈಝಲ್ ಝುಹ್ರಿ ಕಲ್ಲುಗುಂಡಿ, ಎಸ್ ವೈ ಎಸ್ ಜಿಲ್ಲಾ ಈಸ್ಟ್ ಝೋನ್ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕಟ್ಟೆಕ್ಕಾರ್ಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಮುಅಲ್ಲಿಂ ಹಬೀಬ್ ಹಿಮಮಿ, ಹಿರಿಯರಾದ ಮೂಸಾನ್ ಹಾಜಿ ದರ್ಖಾಸ್,ಎಸ್ ವೈ ಎಸ್ ಗೂನಡ್ಕ ಪ್ರಮುಖರಾದ ಅಬ್ದುಲ್ಲ ಮುಸ್ಲಿಯಾರ್, ಹನೀಫ್ ಝೈನಿ, ಅಶ್ರಫ್ ಎ ಟಿ, ಎಸ್ ಎಂ ಅಬ್ದುಲ್ಲ ಗೂನಡ್ಕ , ಹಾಜಿ ಅಬ್ದುಲ್ಲ ಕೊಪ್ಪತ್ತಕಜೆ, ಡಿ ಎ ಉಮ್ಮರ್ ದರ್ಖಾಸ್,ಜಿ ಎಂ ಅಬ್ದುಲ್ಲ, ಅಲ್ ಅಮೀನ್ ಉಪಾಧ್ಯಕ್ಷ ಸಿ ಎಂ ಅಬ್ದುಲ್ಲ, ಕಾರ್ಯದರ್ಶಿ ಅಬ್ದುರ್ರಹೀಂ ಕೊಪ್ಪತ್ತಕಜೆ,ಎಸ್ ಎಸ್ ಎಫ್ ಗೂನಡ್ಕ ಅಧ್ಯಕ್ಷ ಹಸೈನ್ ಎ ಟಿ ದೊಡ್ಡಡ್ಕ ,ಹಾರಿಸ್ ಝಂ ಝಂ, ಎಸ್ ಬಿ ಎಸ್ ಗೂನಡ್ಕ ಅಧ್ಯಕ್ಷ ಇಸ್ಹಾಖ್ ಮುಂತಾದವರು ಉಪಸ್ಥಿತರಿದ್ದರು.ಎಸ್ ವೈ ಎಸ್ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿ, ನಿರೂಪಿಸಿದರು.ಎಸ್ ಎಸ್ ಎಫ್ ಉಪಾಧ್ಯಕ್ಷ ಸಿದ್ದೀಕ್ ಗೂನಡ್ಕ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.