ಸೌದಿ ಅರೇಬಿಯಾ(ವಿಶ್ವಕನ್ನಡಿಗ ನ್ಯೂಸ್): ಯುನೈಟೆಡ್ ಮುಲ್ಕಿ ಫೌಂಡೇಶನ್ (UMF) ಇದರ ಜುಬೈಲ್ ಘಟಕದ ವತಿಯಿಂದ ಅಲ್ ಮಾನ ಹಾಸ್ಪಿಟಲ್ ಜುಬೈಲ್ ನಲ್ಲಿ ಮರ್ ಹೂಂ ಅಬ್ದುಲ್ ಖಾದರ್ ಎಮಿರೇಟ್ಸ್ ರವರ ಸ್ಮರಣಾರ್ಥ ಬ್ರಹತ್ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಸಲಾಯಿತು.
UMF ಸದಸ್ಯರು ಹಾಗು ಸಂಸ್ಥೆಯ ಹಿತೈಷಿಗಳು ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ಶಿಬಿರಿವನ್ನು ಯಶಸ್ವಿಗೊಳಿಸಿದರು. ಸಂಸ್ಥೆಯ ಈ ಜನಹಿತ ಕಾರ್ಯಕ್ರಮವು ಅನಿವಾಸಿ ಭಾರತೀಯರ ಪ್ರಶಂಸೆಗೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪರಿಸರದ ಅನಿವಾಸಿ ಭಾರತೀಯರು ಎರಡು ದಶಕಳಿಂದ ಸೌದಿ ಅರೇಬಿಯಾದಲ್ಲಿ ಮುಲ್ಕಿ ಮುಸ್ಲಿಂ ಅಸೋಸಿಯೇಷನ್ ಎಂಬ ಹೆಸರಿನಲ್ಲಿ ಮುಲ್ಕಿ ಪರಿಸರದ ಜನರಿಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಇತ್ತೀಚೆಗೆ ಸೌದಿ ಸಂಸ್ಥೆಯು ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಮುಲ್ಕಿಯ ಮುಸ್ಲಿಮರನ್ನು ಒಂದೇ ಸಂಘಟನೆಯಡಿಯಲ್ಲಿ ಒಗ್ಗೂಡಿಸುವ ನೂತನವಾದ ಯೋಜನೆಯನ್ನು ಪ್ರಾರಂಭಿಸಿತು,ಅದರಂತೆ ಯುನೈಟೆಡ್ ಮುಲ್ಕಿ ಫೌಂಡೇಶನ್ ರೂಪಿಕಾರಣವಾಯಿತು.
ನೂತನ UMF ಸಮಿತಿಯು ಮುಲ್ಕಿ ಹಾಗು ಇತರ ಆನಿವಾಸಿಗಳ ಸಂಕಷ್ಟಗಳಿಗೆ ನೆರವಾಗಲು ಹಾಗು ಹಲವಾರು ಸಮಾಜ ಕಲ್ಯಾಣ ಯೋಜನೆಗಳನ್ನು ನಡೆಸಲು ಉದ್ದೇಶಿಸಿದೆ ಅದರ ಭಾಗವಾಗಿ ಜುಬೈಲ್ ಘಟಕ ಈ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.