ಜೆದ್ದಾ(www.vknews.in): ಮಾರ್ಚ್ 31, 2021 ರಿಂದ ಜಾರಿಗೆ ಬರುವಂತೆ ಸೌದಿ ಅರೇಬಿಯಾವು ತನ್ನ ತಾತ್ಕಾಲಿಕ ಪ್ರಯಾಣ ನಿಷೇಧವನ್ನು ತೆರವುಗೊಳಿಸಿ ಎಲ್ಲಾ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಪುನರಾರಂಭಿಸಲು ನಿರ್ಧರಿಸಿದೆ.
ಸೌದಿ ಆಂತರಿಕ ಸಚಿವಾಲಯವು ಹೊರಡಿಸಿದ ಪ್ರಕಟಣೆಯಲ್ಲಿ ಸೌದಿ ಪ್ರಜೆಗಳು ಹಾಗೂ ವಿದೇಶಿಗಳಿಗೆ 2021 ಮಾರ್ಚ್ 31ರಿಂದ ಸೌದಿ ಅರೇಬಿಯಾದಿಂದ ಹೊರಗೆ ಪ್ರಯಾಣಿಸಲು ಮತ್ತು ವಿದೇಶಗಳಿಂದ ರಾಷ್ಟ್ರಕ್ಕೆ ಹಿಂತಿರುಗಲು ಅವಕಾಶ ಕಲ್ಪಿಸಲಾಗಿದೆ. ಮಾತ್ರವಲ್ಲ ಅಂತರರಾಷ್ಟ್ರೀಯ ವಿಮಾನಗಳ ಮೇಲಿನ ಎಲ್ಲಾ ತಾತ್ಕಾಲಿಕ ನಿಷೇಧವನ್ನು ತೆಗೆದುಹಾಕಲು ನಿರ್ಧರಿಸವಾಗಿದೆ. ಸೌದಿ ಅರೇಬಿಯಾದ ಎಲ್ಲಾ ವಾಯು, ಸಮುದ್ರ ಮತ್ತು ಭೂ ಗಡಿಗಳು ಮತ್ತೆ ಹಿಂದಿನಂತೆ ತೆರೆಯಲ್ಪಡುತ್ತವೆ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.