(www.vknews.com) : ತುಂಬೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಸ್ ಡಿ ಪಿ ಐ ಪಕ್ಷದಿಂದ ವಿಜೇತರಾದ ಅಭ್ಯರ್ಥಿಗಳಿಗೆ ಮತ್ತು ಮತದಾರರಿಗೆ ಅಭಿನಂದಿಸುವ ಕಾರ್ಯಕ್ರಮವು ತುಂಬೆ ಮದಕ ಜಂಕ್ಷನ್ ನಲ್ಲಿ ಮರ್ಹೂಮ್ ಕೆ.ಎಮ್.ಶರೀಫ್ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ ಸದಸ್ಯರಾದ ರಿಯಾಝ್ ಫರಂಗಿಪೇಟೆಯವರು ಮತದಾರರಿಗೆ ಮತ್ತು ಪಕ್ಷದಿಂದ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದಿಸಿದರು,ವಿಜೇತ ಅಭ್ಯರ್ಥಿಗಳ ಜವಾಬ್ದಾರಿಗಳನ್ನು ನೆನಪಿಸುತ್ತಾ ದಿಕ್ಸೂಚಿ ಭಾಷಣ ಗೈದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಗ್ರಾಮ ಸಮಿತಿ ಅಧ್ಯಕ್ಷರಾದ ಅಬ್ದುಲ್ ಅಝೀಝ್ ರವರು ವಹಿಸಿದ್ದರು.
ಎಸ್ದಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಾಹುಲ್ ಹಮೀದ್, ಜಿಲ್ಲಾ ಕಾರ್ಯದರ್ಶಿಗಳಾದ ಅನ್ವರ್ ಸಾದಾತ್ ಬಜೆತ್ತೂರ್, ಎಸ್ದಿಪಿಐ ಮಂಗಳೂರು ವಿಧಾನಸಭಾ ಅಧ್ಯಕ್ಷರಾದ ಅಬ್ಬಾಸ್ ಕಿನ್ಯ, ಉಪಾಧ್ಯಕ್ಷರಾದ ಸುಲೈಮಾನ್ ಉಸ್ತಾದ್ ರವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಝಹೂರ್ ಅಹಮದ್, ತುಂಬೆ ಎಸ್ದಿಪಿಐ ಮುಖಂಡರಾದ ಮೂಸಬ್ಬ, ಇರ್ಫಾನ್ ತುಂಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಮುಹಮ್ಮದ್ ಝಹೂರ್,ಅಬ್ದುಲ್ ಅಝೀಝ್,ಆತಿಕಾಬಾನು, ಜೆಸಿಂತಾ ಡಿಸೋಜ,ಮುನೀರಾ ಅಕ್ಬರ್ ಹಾಗೂ ಪಕ್ಷದ ಬೆಂಬಲದಿಂದ ಸ್ಪರ್ಧಿಸಿದ ಇರ್ಫಾನ್ ತುಂಬೆ, ಮುಹಮ್ಮದ್ ಇಸ್ಮಾಯಿಲ್,ದಾವೂದ್ ವಳವೂರು, ಫೌಝಿಯಾ ಸಂಶುದ್ದೀನ್ ಮತ್ತು ಪಕ್ಷದ ಚುನಾವಣಾ ಉಸ್ತುವಾರಿಯಾದ ಮೂಸಬ್ಬ ಇವರುಗಳಿಗೂ ಪಕ್ಷದ ನಾಯಕ ಮತ್ತು ಮಹಿಳಾ ನಾಯಕಿಯರುಗಳಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾಯಿಸಲಾಯಿತು.
ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಹಲವು ಯುವಕರು ಪಕ್ಷಕ್ಕೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಉಪಹಾರ ನೀಡಲಾಯಿತು. ರಹೀಮ್ ಜೆ ತುಂಬೆ ಕಾರ್ಯಕ್ರಮ ನಿರೂಪಿಸಿದರು.ಇಂತಿಯಾಝ್ ತುಂಬೆ ಸ್ವಾಗತಿಸಿದರು.ಸುಹಾಝ್ ಧನ್ಯವಾದಗೈದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.