ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ವಿದೇಶಿಯರು ರಜೆಯಲ್ಲಿ ತಾಯ್ನಾಡಿಗೆ ತೆರಳಿ ರಜಾವಧಿ ಮುಕ್ತಾಯವಾಗುವುದರ ಮೊದಲು ಸೌದಿ ಅರೇಬಿಯಾ ಪ್ರವೇಶಿಸಲು ವಿಫಲರಾದವರಿಗೆ 3 ವರ್ಷ ಸೌದಿ ಅರೇಬಿಯಾ ಪ್ರವೇಶ ನಿಷೇಧಗೊಳಿಸಲಾಗಿದೆ ಎಂದು ಸೌದಿ ಜವಾಝಾತ್ ಪ್ರಕಟಣೆಯಲ್ಲಿ ತಿಳಿಸಿದೆ.
ಅನೇಕ ವಿದೇಶಿಯರು ಈ ಕುರಿತು ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತಿರುವುದರಿಂದಾಗಿ ಸೌದಿ ಜವಾಝಾತ್ ಈ ಸ್ಪಷ್ಟೀಕರಣ ನೀಡಿದೆ. ಅದಾಗ್ಯೂ ರಜೆಯಲ್ಲಿ ತಾಯ್ನಾಡಿಗೆ ತೆರಳಿ ಕೊವಿಡ್ ಲಾಕ್ ಡೌನ್ ಕಾರಣದಿಂದಾಗಿ ಸಿಲುಕಿಕೊಂಡವರಿಗೆ ಈ ನಿಷೇಧ ಬಾಧಿತವಲ್ಲ ಎನ್ನಲಾಗಿದೆ. ಅಂತಹವರಿಗೆ ವೀಸಾ ಹಾಗೂ ರಜಾವಧಿಯನ್ನು ವಿಸ್ತರಿಸಿಕೊಡುವ ಪ್ರಕ್ರಿಯೆ ಚಾಲನೆಯಲ್ಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.