ಜೆದ್ದಾ(www.Vknews.in): ವಿದೇಶಿ ಕಾರ್ಮಿಕರು ಬಹಳ ಕಾತರದಿಂದ ನಿರೀಕ್ಷಿಸುತ್ತಿದ್ದ ಹೊಸ ಕಾರ್ಮಿಕ ನೀತಿಯು ಸೌದಿ ಅರೇಬಿಯಾದಲ್ಲಿ 2021ನೇ ಮಾರ್ಚ್ 14 ರಿಂದ ಜಾರಿಗೆ ಬಂದಿದ್ದು, ಹೊಸ ನೀತಿಯ ಪ್ರಕಾರ ವಿದೇಶಿ ಕಾರ್ಮಿಕರು ತಮ್ಮ ಉದ್ಯೋಗದಾತನ ಅನುಮತಿಯ ವಿನಹ ರೀ ಎಂಟ್ರಿ ಎಕ್ಸಿಟ್ ಅಥವಾ ಫೈನಲ್ ಎಕ್ಸಿಟ್ ನಲ್ಲಿ ತಮ್ಮ ತಾಯ್ನಾಡಿಗೆ ತೆರಳಬಹುದಾಗಿದೆ ಮಾತ್ರವಲ್ಲ ಸ್ಪೋನ್ಸರ್ ನ ಅನುಮತಿಯಿಲ್ಲದೇ ತಮ್ಮ ಉದ್ಯೋಗ ಹಾಗೂ ಉದ್ಯೋಗದಾತನನ್ನು ಬದಲಾಯಿಸಬಹುದಾಗಿದೆ. ಈ ಎಲ್ಲಾ ಸೇವೆಗಳು ಇಂದಿನಿಂದ ಕಾರ್ಮಿಕರಿಗೆ ತಮ್ಮ ಅಬ್ಶಿರ್ ಪೋರ್ಟಲ್ ಮೂಲಕ ಲಭ್ಯವಾಗಲಿದೆ.
ಸೌದಿಯಲ್ಲಿ ಉದ್ಯೋಗದಲ್ಲಿರುವ ವಿದೇಶಿ ಕಾರ್ಮಿಕರು ಇದುವರೆಗೂ ತಮ್ಮ ಸ್ಪೋನ್ಸರ್ ನ ಅನುಮತಿಯಿಲ್ಲದೇ ಸೌದಿ ಅರೇಬಿಯಾವನ್ನು ತೊರೆಯುವಂತಿರಲಿಲ್ಲ ಹಾಗೂ ಉದ್ಯೋಗದಾತನು ಎಷ್ಟೇ ಕಿರುಕುಳ ನೀಡಿದರೂ ಅಥವಾ ವೇತನ ಸರಿಯಾಗಿ ನೀಡದಿದ್ದರೂ ಕೂಡ ತಮ್ಮ ಉದ್ಯೋಗದಾತನನ್ನು ಬಿಟ್ಟು ಹೋಗುವಂತಿರಲಿಲ್ಲ. ಈಗ ಜಾರಿಗೆ ಬಂದಿರುವ ಹೊಸ ಕಾರ್ಮಿಕ ನೀತಿಯು ವಿದೇಶಿ ಕಾರ್ಮಿಕರ ಈ ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆದಿದ್ದು, ವಿದೇಶಿ ಕಾರ್ಮಿಕರ ಮುಖದಲ್ಲಿ ಮಂದಹಾಸವನ್ನು ಬೀರುವಂತೆ ಮಾಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.