ಮಂಗಳೂರು(www.Vknews.in):ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್, ಮಂಜನಾಡಿಯಲ್ಲಿ ಇದೇ ಬರುವ ಮಾರ್ಚ್ 16ರಂದು ಬೆಳಿಗ್ಗೆ 10.30ರಿಂದ “ಯುನೈಟ್ ಗಲ್ಫ್ ಸಮಿಟ್” ಕಾರ್ಯಕ್ರಮವು ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಕ್ಯಾಂಪಸ್ ನಲ್ಲಿರುವ ಶರಫುಲ್ ಉಲಮಾ ಸಭಾಂಗಣದಲ್ಲಿ ನಡೆಯಲಿದೆ.
ಇದೇ ದಿವಸ ಬೆಳಿಗ್ಗೆ 10.00ಗಂಟೆಗೆ ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ನೂತನ ಫ್ಲಾಟ್ ನ್ನು ಅಸ್ಸಯ್ಯಿದ್ ಇಸ್ಮಾಯಿಲ್ ತಂಙಳ್ ರವರು ಉದ್ಘಾಟನೆ ಮಾಡಲಿದ್ದಾರೆ.
ಊರಿನಲ್ಲಿರುವ ಸದಸ್ಯರು ಹಾಗೂ ಹಿತೈಷಿಗಳೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿಯವರು ಕೇಳಿಕೊಂಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.