ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಮುಂಬರುವ ಪವಿತ್ರ ರಂಜಾನ್ ತಿಂಗಳಲ್ಲಿ ರೆಸ್ಟೋರೆಂಟ್ಗಳು ಮತ್ತು ಹೋಟೆಲ್ಗಳಲ್ಲಿ ಯಾವುದೇ ಇಫ್ತಾರ್ ಅಥವಾ ಸುಹೂರ್ ಬಫೆಟ್ (ಮುಂಜಾನೆ ಊಟ) ಗಳನ್ನು ಅನುಮತಿಸಲಾಗುವುದಿಲ್ಲ ಮತ್ತು ಮಸೀದಿಗಳಲ್ಲಿಯೂ ಸಾರ್ವಜನಿಕ ಇಫ್ತಾರ್ ಇರುವುದಿಲ್ಲ ಎಂದು ಸೌದಿ ಸರಕಾರವು ಘೋಷಿಸಿದೆ.
ರಂಜಾನ್ ಮಾಸ ಹಾಗೂ ಈದ್ ಅಲ್-ಫಿತರ್ ರಜಾದಿನಗಳಲ್ಲಿ ಕರೋನವೈರಸ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳು ಮತ್ತು ತಡೆಗಟ್ಟುವ ಪ್ರೋಟೋಕಾಲ್ಗಳ ಭಾಗವಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಶಿಫಾರಸುಗಳನ್ನು ಮಾಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೌದಿ ಸರಕಾರವು ಎಲ್ಲಾ ಸಚಿವಲಯಗಳಿಗೂ ಸುತ್ತೋಲೆ ಹೊರಡಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.