ಅಜ್ಮಾನ್ (ವಿಶ್ವ ಕನ್ನಡಿಗ ನ್ಯೂಸ್) : ಎಟಿಎಂನಲ್ಲಿ ಪತ್ತೆಯಾದ ನಗದು ಹಣವನ್ನು ಅಧಿಕಾರಿಗಳಿಗೆ ಹಿಂದಿರುಗಿಸಿದ ಭಾರತೀಯ ವಲಸಿಗ ಪಾಂಡಿಯನ್ ಅವರ ಪ್ರಾಮಾಣಿಕತೆಗಾಗಿ ಅಜ್ಮಾನ್ ಪೊಲೀಸರು ಗೌರವಿಸಿದರು.
ಲೆಫ್ಟಿನೆಂಟ್ ಕರ್ನಲ್ ಅಬ್ದುಲ್ಲಾ ಖಲ್ಫಾನ್ ಅಬ್ದುಲ್ಲಾ ಅಲ್ ನುಯಿಮಿ, ಡೆಪ್ಯೂಟಿ ಕಮಾಂಡರ್-ಇನ್-ಚೀಫ್ ಕಚೇರಿಯ ನಿರ್ದೇಶಕರು, ಭದ್ರತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಸಹಯೋಗಿಗಳಿಗೆ ಬಹುಮಾನ ನೀಡುವ ಪೊಲೀಸ್ ಇಲಾಖೆಯ ಉಪಕ್ರಮದ ಭಾಗವಾಗಿ ಪಾಂಡಿಯನ್ ಅವರನ್ನು ಗೌರವಿಸಲಾಗಿದೆ ಎಂದು ಹೇಳಿದರು.
ಹಣವನ್ನು ತಕ್ಷಣವೇ ಹಿಂದಿರುಗಿಸುವ ಮೂಲಕ ಪಾಂಡಿಯನ್ ಉತ್ತಮ ಕೆಲಸ ಮಾಡಿದ್ದಾರೆ. ಇಲಾಖೆಯು ಅವರಿಗೆ ಸಹಕರಿಸುವ ಜನರನ್ನು ಗೌರವಿಸಲು ಉತ್ಸುಕವಾಗಿದೆ ಎಂದು ಅಲ್ ನುಯಿಮಿ ಹೇಳಿದರು.
ಪಾಂಡಿಯನ್ ಪ್ರಕಾರ, ಆತ ಏಟಿಎಂ ನಿಂದ ರಶೀದಿಯನ್ನು ಸಂಗ್ರಹಿಸಿದ್ದನು, ಆದರೆ ನಗದನ್ನು ತೆಗೆದುಕೊಳ್ಳಲು ಮರೆತನು. “ಅವನು ಬಹುಶಃ ಏನಾದ್ರು ತಲೆಬಿಸಿಯಲ್ಲಿ ಇರಬಹುದು, ಆದ್ದರಿಂದ ಅವನು ನಗದು ತೆಗೆದುಕೊಳ್ಳುವುದನ್ನು ಮರೆತಿದ್ದಾನೆ. ನನಗೆ ಅವನ ಬಗ್ಗೆ ಕನಿಕರ ಉಂಟಾಯಿತು, ಮತ್ತು ಅವನ ಕುಟುಂಬಕ್ಕೆ ಔಷಧಿಗಳನ್ನು ಅಥವಾ ಆಹಾರವನ್ನು ಖರೀದಿಸಲು ಅವನಿಗೆ ಹಣ ಬೇಕಾಗಬಹುದು ಎಂದು ನಾನು ಭಾವಿಸಿದೆ ಎಂದು ಪಾಂಡಿಯನ್ ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.