ಮುಂಬೈ (ವಿಶ್ವ ಕನ್ನಡಿಗ ನ್ಯೂಸ್) : ಎಲ್ಲೇ ದಾಳಿ ನಡೆದರೂ ಹಲವು ಮಂದಿ ಹಿಡಿಯಲ್ಪಡುತ್ತಾರೆ, ಹಾಗೆಯೇ ಈ ಮಗು (ಆರ್ಯನ್ ಖಾನ್) ಸಹ ಡ್ರಗ್ಸ್ ಸೇವಿಸಿರಬಹುದು ಎಂದು ಊಹಿಸುತ್ತಿದ್ದೇವೆ, ಆದರೆ ಪ್ರಕ್ರಿಯೆಗಳು ಜಾರಿಯಲ್ಲಿವೆ, ಆ ಮಗುವಿಗೆ ಉಸಿರಾಡಲು ಅವಕಾಶ ನೀಡಬೇಕು” ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.
ಬಾಲಿವುಡ್ ನಲ್ಲಿ ಏನೇ ಸಂಭವಿಸಿದರೂ ಮಾಧ್ಯಮಗಳು ಪರಿಶೀಲನೆ ಮಾಡಿ ನಿರ್ಧಾರಕ್ಕೆ ಬಂದುಬಿಡುತ್ತವೆ. ಆ ಮಗುವಿಗೆ ಒಂದು ಅವಕಾಶ ನೀಡಿ, ವರದಿಗಳು ಬರಲಿ. ಆರ್ಯನ್ ಖಾನ್ ಇನ್ನೂ ಮಗು ಆತನ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿ ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.
ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅತಿಥಿಯಾಗಿ ಭಾಗವಹಿಸಿದ್ದ, ಮುಂಬೈ ನ ಕಡಲ ತೀರದಲ್ಲಿ ನಡೆಯುತ್ತಿದ್ದ ಕ್ರೂಸ್ ಪಾರ್ಟಿಯ ಮೇಲೆ ಶನಿವಾರ ಎನ್ ಸಿಬಿ ದಾಳಿ ನಡೆಸಿ ಡ್ರಗ್ಸ್ ನ್ನು ಪತ್ತೆ ಮಾಡಿತ್ತು. ಆರ್ಯನ್ ಖಾನ್ ನ್ನು ಡ್ರಗ್ಸ್ ಆರೋಪದಡಿ ಎನ್ ಸಿಬಿ ಬಂಧಿಸಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.