ಜೆದ್ದಾ(www.Vknews.in): ಸೌದಿ ವಿದೇಶಾಂಗ ಸಚಿವಾಲಯವು ವಿದೇಶಿ ಕಾರ್ಮಿಕರ ಫ್ಯಾಮಿಲಿ ವಿಸಿಟಿಂಗ್ ವೀಸಾ ಪ್ರಕ್ರಿಯೆಯಯನ್ನು ಸರಳಗೊಳಿಸಿದ್ದು, ಪ್ರಸ್ತುತ ಎಲ್ಲಾ ವೃತ್ತಿಯಲ್ಲಿರುವವರಿಗೂ ಅರ್ಜಿ ಸಲ್ಲಿಸಿದ ಕೇವಲ ಮೂರೇ ದಿನಗಳಲ್ಲಿ ವೀಸಾವನ್ನು ನೀಡಲಾಗುವುದೆಂದು ಸ್ಪಷ್ಟಪಡಿಸಿದೆ.
ವಿದೇಶಾಂಗ ಸಚಿವಾಲಯದ ಇ-ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದವರಿಗೆ ವೀಸಾಗಳು ಸುಲಭವಾಗಿ ಲಭ್ಯವಾಗಲಿದ್ದು, ಅರ್ಜಿದಾರರ, ಪತ್ನಿ, ಮಕ್ಕಳು, ತಂದೆ ಮತ್ತು ತಾಯಿಯ ಹತ್ತಿರದ ಸಂಬಂಧಿಗಳನ್ನು ಭೇಟಿ ವೀಸಾಕ್ಕೆ ಪರಿಗಣಿಸಲಾಗುತ್ತದೆಂದು ತಿಳಿಸಲಾಗಿದೆ.
ಫ್ಯಾಮಿಲಿ ವಿಸಿಟ್ ಪಡೆಯಲು ಅರ್ಜಿದಾರರು ಕೆಲವು ಮಾನದಂಡಗಳನ್ನು ಪಾಲಿಸಬೇಕಾಗಿದ್ದು, ಅರ್ಜಿದಾರರು ಕೆಲಸದ ವೀಸಾ ಹೊಂದಿದ್ದು, ಮೂರು ತಿಂಗಳ ಮಾನ್ಯ ಇಖಾಮಾ ಹೊಂದಿರಬೇಕಾಗುತ್ತದೆ. ಚೇಂಬರ್ ಆಫ್ ಕಾಮರ್ಸ್ ನ ಎಲೆಕ್ಟ್ರಾನಿಕ್ ಸೇವೆಯ ಮೂಲಕ ವೀಸಾ ಅರ್ಜಿಯನ್ನು ದೃಢೀಕರಿಸಬೇಕಾಗುತ್ತದೆ ಎಂದು ಸಚಿವಾಲಯವು ಹೇಳಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.