ಜೆದ್ದಾ(www.vknews.in): ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಔಸಾಫ್ ಸಯೀದ್ ಭಾರತದಿಂದ ನೇರವಾಗಿ ಸೌದಿ ಅರೇಬಿಯಾಕ್ಕೆ ಹಾರಲು ಶೀಘ್ರದಲ್ಲೇ ಅನುಮತಿ ನೀಡಬಹುದು ಎಂದು ಹೇಳಿದ್ದಾರೆ. ವರದಿಯ ಪ್ರಕಾರ, ಅಕ್ಟೋಬರ್ ಕೊನೆಯ ವಾರದಲ್ಲಿ ಅನುಕೂಲಕರ ಘೋಷಣೆಯನ್ನು ಮಾಡಲಾಗುವುದು ಎಂದು ರಾಯಭಾರಿ ಹೇಳಿದ್ದಾರೆ. ಸೌದಿ-ಅನುಮೋದಿತ ಲಸಿಕೆಯ ಎರಡು ಡೋಸ್ ಪಡೆದವರಿಗೆ ಕ್ಯಾರೆಂಟೈನ್ ಇಲ್ಲದೇ ಮತ್ತು ಒಂದು ಡೋಸ್ ಪಡೆದವರಿಗೆ ಕ್ವಾರಂಟೈನ್ ನೊಂದಿಗೆ ನೇರ ಪ್ರವೇಶಕ್ಕೆ ಅನುಮತಿಸಲು ಚರ್ಚೆಗಳು ನಡೆದಿವೆ.
ಈ ತಿಂಗಳ 20 ರಿಂದ ರಿಯಾದ್ ಸೀಸನ್ ಆರಂಭವಾಗಲಿದ್ದು, ಸೌದಿ ಅರೇಬಿಯಾ ಹೆಚ್ಚು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಪ್ರಯಾಣ ನಿರ್ಬಂಧಗಳನ್ನು ಸರಾಗಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.