ಮಂಗಳೂರು (www.vknews.com) : ನಗರದ ಮೊರ್ಗನ್ಸ್ ಗೇಟ್ ನಲ್ಲಿರುವ ರಾಜೇಶ್ ಪ್ರಭು ಮಾಲಕತ್ವದ ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರಾದ ಚಂದ್ರು ಮತ್ತು ಅಶ್ರಫ್ ಎಂಬವರಿಗೆ ಸರಕು ಸಾಗಾಟದ ಕೂಲಿ ನೀಡದೆ ಸತಾಯಿಸುತ್ತಿದ್ದಾಗ ಕೂಲಿ ನೀಡುವಂತೆ ಆಗ್ರಹಿಸಿದ ಕಾರ್ಮಿಕರಿಗೆ ಕೂಲಿ ನೀಡಲು ನಿರಾಕರಿಸಿದ ಸಂಸ್ಥೆಯ ಮಾಲಕರೊಂದಿಗೆ ಮತ್ತು ಕಾರ್ಮಿಕರ ನಡುವೆ ನಡೆದ ಮಾತಿನ ಚಕಮುಕಿ ಯಲ್ಲಿ ಮಾಲಕ ತನ್ನ ಕೇಳಸದಾಳುವಿಗೆ ಹಾರಿಸಿದ ಗುಂಡು ಗುರಿ ತಪ್ಪಿ ಮಾಲಕನ ಮಗನಿಗೆ ತಗುಲಿದ ಘಟನೆ ನಡೆದಿದೆ ಈ ದುರ್ಘಟನೆಯಲ್ಲಿ ಮಿಸ್ ಫೈರಿಂಗ್ ಆಗಿ ಮಾಲಕನ ಮಗ ಸುಧೀಂದ್ರ ನ ತಲೆಗೆ ಗುಂಡು ತಗುಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದೆ ಎಂದು ತಿಳಿದು ಬಂದಿದೆ ಈ ದುರ್ಘಟನೆಗೆ ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಮಂಗಳೂರು ನಗರ ಸಮಿತಿ ಖೇದ ವ್ಯಕ್ತಪಡಿಸುತ್ತದೆ
ಕಾರ್ಮಿಕರನ್ನು ದುಡಿಸಿ ಕೂಲಿ ನೀಡದ ಸಂಸ್ಥೆ ಮತ್ತು ಕೂಲಿ ಕೇಳಿದಾಗ ಪಿಸ್ತೂಲ್ ಮೂಲಕ ಗುಂಡು ಹೊಡೆಯುವ ಗುಂಡಾ ಪ್ರವೃತ್ತಿಯನ್ನು ಯೂನಿಯನ್ ಖಂಡಿಸಿದೆ
ಈ ಪ್ರಕರಣಕ್ಕೆ ಸಂಬಂಧಿಸಿ ಪಿಸ್ತೂಲಿನಿಂದ ಗುಂಡು ಹೊಡೆದ ಆರೋಪಿ ಸಂಸ್ಥೆಯ ಮಾಲಕ ಘಟನೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದ್ದು ಕಾರ್ಮಿಕರ ಮೇಲೆ ಆರೋಪ ಹೊರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಾರ್ವಜನಿಕ ಮೂಲಗಳಿಂದ ಕೇಳಿ ಬರುತ್ತಿದೆ ಆದ್ದರಿಂದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಾನೂನು ರೀತಿಯ ಕ್ರಮ ಕೈಗೊಂಡು ಸಂತ್ರಸ್ಥ ಕಾರ್ಮಿಕರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಎಸ್ಡಿಟಿಯು ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ಇಕ್ಬಾಲ್ ಕಣ್ಣೂರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.