ನಿನ್ನೆ ರಾತ್ರಿ ದುಬೈಗೆ ತೆರಳಬೇಕಾಗಿದ್ದ ಇವರು ತಮ್ಮ ಪ್ರಯಾಣವನ್ನು ಮುಂದಿನ ವಾರಕ್ಕೆ ಮುಂದೂಡಿದ್ದರು
ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಇಂದು ಬೆಳಗ್ಗೆ ತಾಲೂಕಿನ ಬಲ್ನಾಡ್ ಎಂಬಲ್ಲಿ ಗೊಬ್ಬರದ ಲಾರಿ ಮತ್ತು ಬೈಕ್ ನಡುವೆ ಉಂಟಾದ ಭೀಕರ ಅಪಘಾತದಲ್ಲಿ ನಗರದ ಬದ್ರಿಯಾ ಜುಮಾ ಮಸೀದಿ ಬಳಿ ಇರುವ ಗೋಲ್ಡನ್ ಬೇಕರಿ ಮಾಲಕ ಅಝೀಝ್ ಮೃತಪಟ್ಟಿದ್ದಾರೆ.
ಮೃತರ ಆಪ್ತ ವಲಯಗಳಿಂದ ತಿಳಿದ ಮಾಹಿತಿಯಂತೆ ನಿನ್ನೆ ರಾತ್ರಿ ದುಬೈಗೆ ತೆರಳಬೇಕಾಗಿದ್ದ ಇವರು ತಮ್ಮ ಪ್ರಯಾಣವನ್ನು ಮುಂದಿನ ಶನಿವಾರಕ್ಕೆ ಮುಂದೂಡಿದ್ದರು. ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಪುಟ್ಟ ಮಕ್ಕಳು, ಸಹೋದರ ಸಹೋದರಿಯರು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.