ದೋಹ(www.vknews.in): ದಿನಾಂಕ 08-10-2021 ನೇ ಶುಕ್ರವಾರ, ಕತಾರ್ ಇಂಡಿಯನ್ ಸೋಷಿಯಲ್ ಫೋರಂ ವತಿಯಿಂದ, C-Ring ರಸ್ತೆಯಲ್ಲಿರುವ ನಸೀಮ್ ಮೆಡಿಕಲ್ ಸೆಂಟರ್ ನ ಸಹಯೋಗದೊಂದಿಗೆ, ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಆಜಾ಼ದೀ ಕಾ ಅಮೃತ್ ಮಹೋತ್ಸವದ ಅಂಗವಾಗಿ, ಮುಖ್ಯವಾಗಿ ವಾಹನ ಚಾಲಕರು ಹಾಗೂ ಕಡಿಮೆ ವೇತನ ಪಡೆಯುವ ಕಾರ್ಮಿಕರಿಗಾಗಿ ಆಯೋಜಿಸಿದ್ದ ಈ ಉಚಿತ ಶಿಬಿರದಲ್ಲಿ, ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿದ್ದ 850 ಮಂದಿ ಉಪಯೋಗ ಪಡೆದರು. ಬೆಳಿಗ್ಗೆ 6.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ನಡೆದ ಈ ಶಿಬಿರದಲ್ಲಿ, ಸಾಮಾನ್ಯವಾಗಿ ಅಗತ್ಯವಾದ ಬ್ಲಡ್ ಪ್ರೆಷರ್, ಬಿ ಎಂ ಐ, ಬ್ಲಡ್ ಶುಗರ್, ಟೋಟಲ್ ಕ್ಲೋರೋಸ್ಟೆರಾಲ್ ಇನ್ನಿತರ ಟೆಸ್ಟ್ ಗಳ ನಂತರ, ನುರಿತ ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆಯನ್ನು ಪಡೆಯುವ ಅವಕಾಶವನ್ನು ಪ್ರತಿಯೊಬ್ಬರಿಗೂ ಕಲ್ಪಿಸಲಾಗಿತ್ತು. ಇದರೊಂದಿಗೆ, ನೇತ್ರವೈದ್ಯರು ಮತ್ತು ದಂತ ವೈದ್ಯರಿಂದ ಕಣ್ಣಿನ ಮತ್ತು ದಂತ ಪರೀಕ್ಷೆಯನ್ನು ಮಾಡಿ, ಅಗತ್ಯವಿದ್ದವರಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು. ಈ ಶಿಬಿರದ ಅಧ್ಯಕ್ಷತೆಯನ್ನು ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ ಅಧ್ಯಕ್ಷರಾದ ಸಯೀದ್ ಕೊಮಾಚಿ ಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಭಾರತೀಯ ದೂತವಾಸದ, ದ್ವಿತೀಯ ಕಾರ್ಯದರ್ಶಿ (ಮಾಹಿತಿ, ಶಿಕ್ಷಣ ಮತ್ತು ಸಂಸ್ಕೃತಿ) ಶ್ರೀ ಕುಲ್ಜಿತ್ ಸಿಂಗ್ ಅರೋರ ರವರು ಶಿಬಿರದ ಉದ್ಘಾಟನೆಯನ್ನು ಮಾಡಿ, ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ ಸಮಾಜ ಸೇವೆಯ ಕಾರ್ಯಗಳನ್ನು ಶ್ಲಾಘಿಸಿ, ಭಾರತೀಯ ದೂತವಾಸದಿಂದ, ಅನಿವಾಸಿ ಭಾರತೀಯರಿಗೆ ದೊರೆಯುವ ಸೇವೆಗಳ ಬಗ್ಗೆ ವಿವರಿಸಿ, ಅದರ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂದು ಹೇಳಿದರು. ಇತರ ಅತಿಥಿಗಳಾಗಿ ಆಗಮಿಸಿದ್ದ ICC ಅಧ್ಯಕ್ಷ ರಾದ ಕೆ ಏನ್ ಬಾಬುರಾಜನ್, ICBF ಅಧ್ಯಕ್ಷರಾದ ಜಿ಼ಯಾದ್ ಉಸ್ಮಾನ್, ನಸೀಮ್ ಮೆಡಿಕಲ್ ಸೆಂಟರ್ ನ Dr. ಮುನೀರ್ ಅಲಿ ಇಬ್ರಾಹಿಮ್ ( General Manager, Staragic Development), Mr. ಬಾಬು ಶಾನವಾಜ಼್ (General Manager, Operations), Mr. ರಿಷಾದ್ (Senior Manager, Operations) ಮತ್ತು Dr. ಮೊಹಮ್ಮದ್ ಶಮೀಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. Dr. ಮೊಹಮ್ಮದ್ ಶಮೀಮ್, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. ಕತಾರ್ ಇಂಡಿಯನ್ ಸೋಷಿಯಲ್ ಫೋರಂ, ಕೇರಳ ರಾಜ್ಯಾಧ್ಯಕ್ಷರಾದ ಮೊಹಮ್ಮದ್ ಅಲಿ, ಕಾರ್ಯದರ್ಶಿಗಳಾದ ಅಹಮದ್ ಕಡಮೆರಿ ಅನುಕ್ರಮವಾಗಿ ಪ್ರಾಸ್ತಾವಿಕ ಭಾಷಣ ಮತ್ತು ಸ್ವಾಗತ ಭಾಷಣ ಮಾಡಿದರು. ಉಸ್ಮಾನ್ ರವರು ಕಾರ್ಯಕ್ರಮವನ್ನು ನಿರೂಪಿಸುವುದರೊಂದಿಗೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ ಎಲ್ಲಾ ಪದಾಧಿಕಾರಿಗಳು, ಅತಿಥಿಗಳ ಜೊತೆಗೂಡಿ, ಶಿಬಿರದ ಪ್ರತಿಯೊಂದು ಸ್ಥಳಕ್ಕೆ ಭೇಟಿ ನೀಡಿ, ವೈದ್ಯರ ಜೊತೆ, ವೈದ್ಯಕೀಯ ಸಿಬ್ಬಂಧಿಯ ಜೊತೆ ಹಾಗೂ ಆರೋಗ್ಯ ತಪಾಸಣೆ ಪಡೆಯುತ್ತಿದ್ದವರೊಂದಿಗೆ ಸಮಾಲೋಚನೆ ನಡೆಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.