(www.vknews.com) : ಸುಪ್ರೀಂ ಕೋರ್ಟ್ ನ ನಿವೃತ ಮುಖ್ಯ ನ್ಯಾಯಮೂರ್ತಿ ಮಾರ್ಕಂಡೇಯ ಕಾಡ್ಜು ರವರು ಪ್ರವಾದಿಯ ಜನ್ಮ ದಿನದ ಬಗ್ಗೆ ಬರೆದ ಫೇಸ್ಬುಕ್ ಪೋಸ್ಟೊಂದು ವೈರಲಾಗಿದೆ.
ಆ ಪೋಸ್ಟ್ ಹೀಗಿದೆ….ನಾನು ಅಲಹಾಬಾದ್ ಹೈಕೋರ್ಟಿನ ಜಡ್ಜ್ ಆಗಿದ್ದಾಗ ಉತ್ತರ ಪ್ರದೇಶದ ಸಹಾನಪೂರಿನ ಕೆಲವರು ಪ್ರವಾದಿಯ ಜನ್ಮದಿನಾಚರಣೆಯನ್ನು ತಡೆಯಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.ನಗರದಲ್ಲಿ ಬೃಹತ್ತಾಗಿ ನಡೆಯುವ ಪ್ರವಾದಿ ಜನ್ಮದಿನದ ಕಾರ್ಯಕ್ರಮಗಳನ್ನು ರದ್ದು ಪಡಿಸಬೇಕೆಂದಾಗಿತ್ತು ಅವರ ಉದ್ದೇಶ.ಅವರಲ್ಲಿ ನಾನು ಕೇಳಿದೆ.ಅದು ತಡೆಯುವ ಅಗತ್ಯವೇನು ? ಅಲ್ಲದೆ ಇದೊಂದು ಜಾತ್ಯತೀತ ರಾಷ್ಟ್ರ. ಇಲ್ಲಿ ಕಾನೂನುಬದ್ದವಾಗಿ ಯಾರಿಗೂ ಯಾವ ಆಚರಣೆ ಬೇಕಾದರೂ ಮಾಡಬಹುದು. ಅದಕ್ಕೆ ಸ್ವಾತಂತ್ರವಿದೆ.
ಅದಕ್ಕೆ ಅವರು ನೀಡಿದ ಉತ್ತರ ಮೂರ್ಖತನದಿಂದ ಕೂಡಿತ್ತು.ಇಸ್ಲಾಮಿನಲ್ಲಿ ಒಂದೇ ಒಂದು ದೇವರು, ಅವನು ಅಲ್ಲಾಹು. ಅವನನ್ನೇ ಆರಾಧಿಸಬೇಕು.ಪ್ರವಾದಿಯ ಜನ್ಮದಿನಾಚರಣೆ ಮಾಡುವ ಮೂಲಕ ಅವರನ್ನು ದೈವತ್ವಕ್ಕೆ ಏರಿಸಲಾಗುವುದು.ಅದು ಅನಿಸ್ಲಾಮಿಕ…
ಅವರಲ್ಲಿ ನಾನು ಹೇಳಿದೆ.ನಿಮ್ಮ ವಾದ ಅರ್ಥಹೀನ. ಜನ್ಮ ದಿನ ಆಚರಿಸುವ ಮೂಲಕ ಮಹಾತ್ಮರನ್ನು ದೈವತ್ವಕ್ಕೆ ಏರಿಸಲಾಗುವುದಿಲ್ಲ. ಮಹಾ ಪುರುಷರನ್ನು ದೇವರೆಂದು ಮುಸ್ಲಿಮರು ಭಾವಿಸುವುದಿಲ್ಲ. ಜನ್ಮ ದಿನಾಚರಣೆ ಸಂದರ್ಭದಲ್ಲಿ ಅವರನ್ನು ಸ್ಮರಿಸಲಾಗುತ್ತದೆ. ಅವರ ಸಂದೇಶ, ಆಚಾರ, ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಯುತ್ತದೆ.ನಾನು ನಿರೀಶ್ವರವಾದಿಯಾದರೂ ಜನ್ಮ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವೆ.ನಿಮಗೆ ಆಚರಿಸಲು ಇಷ್ಟವಿಲ್ಲದಿದ್ದರೆ ದೂರನಿಲ್ಲಿ. ಆಚರಿಸುವವರನ್ನು ತಡೆಯಬೇಡಿ.ಎಂದು ಅವರ ಅರ್ಜಿ ತಳ್ಳಿಹಾಕಿದೆ.
ನನ್ನ ಅಭಿಪ್ರಾಯದಂತೆ ಪ್ರವಾದಿಯ ಜನ್ಮದಿನಾಚರಣೆಯನ್ನು ವಿರೋಧಿಸುವವರು ಇಸ್ಲಾಮನ್ನು ಅವಹೇಳನ ಮಾಡುವ ಅಸಹಿಷ್ಣು ಭ್ರಾಂತರು.ಇಂತಹ ಜನರಿಂದಲೇ ಇಸ್ಲಾಮಿಗೆ ಕೆಟ್ಟ ಹೆಸರು ಬಂದಿದೆ ಎಂದು ಹೇಳುತ್ತಾ ಫೇಸ್ಬುಕ್ ಪೋಸ್ಟ್ ಕೊನೆಗೊಳ್ಳುತ್ತದೆ.
ಅವರ ಫೇಸಬುಕ್ ಪೋಸ್ಟ್ ಲಿಂಕ್ ಕೆಳಗೆ ನೀಡಲಾಗಿದೆ.
Markandey Katju – Eid un Nabi Some Muslims commenting on… | Facebook
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.