ಸ್ನೇಹ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕ ಬಜಾಲ್ ವತಿಯಿಂದ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
ಪಕ್ಕಲಡ್ಕ (ವಿಶ್ವ ಕನ್ನಡಿಗ ನ್ಯೂಸ್) : ಸ್ನೇಹ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕ ವತಿಯಿಂದ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಇಲ್ಲಿನ ಇಬ್ರಾಯೀಮ್ ಸಯೀದ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಯಿತು.
ಎಸ್. ಎಸ್. ಎಲ್. ಸಿ ೨೦೧೯-೨೦೨೦ ಮತ್ತು ೨೦೨೦ – ೨೦೨೧ ವರ್ಷದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ನಂತರ ಹತ್ತನೇ ತರಗತಿಯ ಶಿಕ್ಷಕ ಶಿಕ್ಷಿಕಿಯರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಸ್ಲಿಂ ಎಜುಕೇಷನಲ್ ಇನ್ಸ್ಟಿಟ್ಯೂಷನ್ ಫೆಡರೇಷನ್ ಇದರ ಉಪಾಧ್ಯಕ್ಷರಾದ ಜನಾಬ್ ಮುಮ್ತಾಜ್ ಅಲಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಿಕ್ಷಣವು ವಿದ್ಯಾರ್ಥಿಗಳ ಪಾಲಿಗೆ ಅಮೂಲ್ಯವಾದ ವಸ್ತು ಆಗಿದೆ ಶಿಕ್ಷಣದಿಂದಾಗಿ ಸಮಾಜದಲ್ಲಿ ಸೌಹಾರ್ದಯುತವಾದ ವಾತಾವರಣ ಉಂಟಾಗಬೇಕು ಗುರಿ ಇಟ್ಟು ವಿದ್ಯಾರ್ಥಿಗಳು ಕಲಿಯಬೇಕು ಎಂದರು ಮಂಗಳೂರಿನ ಒಳಪ್ರದೇಶವಾದ ಪಕ್ಕಲಡ್ಕದಲ್ಲಿ ಸ್ನೇಹ ಶಾಲೆ ಮಾಡುವ ಶೈಕ್ಷಣಿಕ ಸೇವಾ ಕಾರ್ಯವನ್ನು ಸ್ಮರಿಸಿದರು. ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಬಹರೈನ್ ಇದರ ಉಪಾಧ್ಯಕ್ಷರಾದ ಜನಾಬ್ ಶಾಹಿರ್ ಕಮಾಲ್ ಶುಭ ಹಾರೈಸಿದರು. ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಇದರ ಅಧ್ಯಕ್ಷರಾದ ಅಬ್ದುಲ್ ವಹೀದ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ಪಿ.ಟಿ. ಎ ಇದರ ಅಧ್ಯಕ್ಷರಾದ ಮೊಹಮ್ಮದ್ ಪಿಬಿ, ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಇದರ ಸದಸ್ಯರಾದ ಮೊಹಸೀನ್ , ಮೊಹಮ್ಮೆದ್ ಸಮೀರ್, ಅಬ್ದುಲ್ ಹಮೀದ್ ಹಾಗು ಹಿರಿಯ ಶಿಕ್ಷಕಿ ಶ್ರೀಮತಿ ಐಡಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಎಸ್. ಎಸ್. ಎಲ್. ಸಿ ೨೦೧೯-೨೦೨೦ ವರ್ಷದ ವಿದ್ಯಾರ್ಥಿ ಜೆ ಮೊಹಮ್ಮದ್ ಆಕಿಫ್ ಮತ್ತು ೨೦೨೦ – ೨೦೨೧ ವಿದ್ಯಾರ್ಥಿನೀ ರೈಹಾನ ತಮ್ಮ ಅನುಭವಗಳನ್ನು ಹಂಚಿದರು.
ಮುಖ್ಯೋಪಾದ್ಯಾಯಿನಿ ಖುರೇಷ ನುಷ್ರತ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ವಿದ್ಯಾರ್ಥಿಗಾಳದ ಫಾಹಿಮಾ ಫಾತಿಮಾ ಮತ್ತು ಸುಮಯ್ಯ ನೂಹ ಕಿರಾತ್ ಪಠಿಸಿದರು, ಅಧ್ಯಾಪಕಿ ಪೌಝಿಯ ಕಾರ್ಯಕ್ರಮ ನಿರೂಪಿಸಿದರು, ಸನ್ಮಾನ ವಿವರಗಳನ್ನು ಶಿಕ್ಷಕಿ ಶ್ರೀಮತಿ ಪಾವನ ಮತ್ತು ಶ್ರೀಮತಿ ಸಹನಾ ರವರು ವಾಚಿಸಿದರು. ಶಾಲಾ ಸಂಚಾಲಕರಾದ ಯೂಸಫ್ ಪಕ್ಕಲಡ್ಕ ಸಮಾರೋಪ ನುಡಿಗಳನ್ನಾಡಿ ಧನ್ಯವಾದವಿತ್ತರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.