ಮಂಗಳೂರು (www.vknews.com) : ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಜಿಲ್ಲಾ ಪ್ರತಿನಿಧಿಗಳ ಸಭೆ ಬಂಟ್ವಾಳದ ಸಾಗರ್ ಹಾಲ್ ನಲ್ಲಿ ನಿಕಟಪೂರ್ವ ಅಧ್ಯಕ್ಷ ಅಥಾವುಲ್ಲ ಜೋಕಟ್ಟೆ ರವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು
ಅಥಾವುಲ್ಲ ಜೋಕಟ್ಟೆ ರವರು ದ್ವಜಾರೋಹಣ ಮಾಡುವ ಮೂಲಕ ಜಿಲ್ಲಾ ಪ್ರತಿನಿಧಿಗಳ ಸಭೆಗೆ ಚಾಲನೆ ನೀಡಿದರು
ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ 2018-21, ರ ವರದಿ ಬಿಡುಗಡೆಗೊಳಿಸಿದರು. ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಐ.ಎಮ್. ಆರ್, ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಅಶ್ರಫ್ ಮಂಚಿ, ಕಾದರ್ ಫರಂಗಿಪೇಟೆ ಪಕ್ಷದ ಮೂರು ವರ್ಷದ ವರದಿ ವಾಚಿಸಿದರು. ಬಳಿಕ ಸಭೆಯಲ್ಲಿ ಅನುಮೋದಿಸಲಾಯಿತು
ನಂತರ 2021-24 ರ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತುಅಧ್ಯಕ್ಷರಾಗಿ ಅಬೂಬಕ್ಕರ್ ಕುಳಾಯಿ, ಉಪಾಧ್ಯಕ್ಷರಾಗಿ ವಿಕ್ಟರ್ ಮಾರ್ಟಿಸ್, ಮಿಸ್ರಿಯಾ ಕಣ್ಣೂರು, ಪ್ರಧಾನ ಕಾರ್ಯದರ್ಶಿಯಾಗಿ ಅನ್ವರ್ ಸಾದಾತ್ ಬಜತ್ತೂರು, ಕಾರ್ಯದರ್ಶಿಯಾಗಿ ಅಕ್ಬರ್ ಬೆಳ್ತಂಗಡಿ, ಶಾಕಿರ್ ಅಳಕೆ ಮಜಲ್, ಸುಹೈಲ್ ಕಾನ್, ಕೋಶಾಧಿಕಾರಿಯಾಗಿ ಇಕ್ಬಾಲ್ ಐಎಮ್ಆರ್. ಸದಸ್ಯರಾಗಿ ಅಬ್ದುಲ್ ಅಝೀಝ್ ಸುರತ್ಕಲ್, ಅಥಾವುಲ್ಲಾ ಜೋಕಟ್ಟೆ, ಅಶ್ರಫ್ ಕೆಸಿರೋಡ್, ಗಣೇಶ್ ಗುರಿಯಾನ, ಇಕ್ಬಾಲ್ ಬೆಳ್ಳಾರೆ, ಜಮಾಲ್ ಜೋಕಟ್ಟೆ, ನಾಸಿರ್ ಸಜಿಪ, ಪ್ರೇಮ ಮಲ್ಲೂರು, ಶಾಫಾ ಸಲ್ಮಾ, ಯೂಸುಫ್ ಆಲಡ್ಕ, ಝಕೀರ್ ಉಳ್ಳಾಲ್ ರವರನ್ನು ಆಯ್ಕೆ ಮಾಡಲಾಯಿತು
ಚುನಾವಣಾಧಿಕಾರಿಯಾಗಿ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಸಹಾಯಕ ಚುನಾವನಾಧಿಕಾರಿಯಾಗಿ ಮುಜಾಹಿದ್ ಪಾಷಾ ನೂತನ ಜಿಲ್ಲಾ ಸಮಿತಿಯ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು
ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯ ರಿಯಾಝ್ ಫರಂಗಿಪೇಟೆ, ಸದಸ್ಯೆ ಶಾಹಿದ ತಸ್ನಿಮ್,ರಾಜ್ಯ ಉಪಾಧ್ಯಕ್ಷ ಅಡ್ವಕೆಟ್ ಮಜೀದ್ ಕಾನ್,ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ರಾಜ್ಯ ಸಮಿತಿ ಸದಸ್ಯರಾದ ಅಕ್ರಮ ಹಸನ್, ಆನಂದ್ ಮಿತ್ತಬೈಲ್, ಜಲೀಲ್ ಕ್ರಷ್ಣಾಪುರ, ಫಯಾಝ್ ದೊಡ್ಡಮನೆ, ಮತ್ತಿತರರು ಉಪಸ್ಥಿತರಿದ್ದರುಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಎಸ್ಎಚ್ ಸ್ವಾಗತಿಸಿ ಮಂಗಳೂರು ಕ್ಷೇತ್ರ ಸಮಿತಿ ಕಾರ್ಯದರ್ಶಿ ಝಹಿದ್ ಮಲಾರ್ ನಿರೂಪಿಸಿದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.