ಫರಂಗಿಪೇಟೆ (www.vknews.com) : ಬದ್ರಿಯಾ ಜುಮಾ ಮಸೀದಿ ಅಮೆಮಾರ್ ಇದರ ನವೀಕೃತಗೊಂಡ ಮಸೀದಿಯನ್ನು ದಕ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಮುಸ್ಲಿಯಾರ್ ಮಂಗಳವಾರ ಉದ್ಘಾಟಿಸಿದರು
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಯ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ ವಹಿಸಿದರು, ಖತೀಬ್ ಅಬ್ದುಲ್ ಲೆತಿಫ್ ಹನೀಫಿ ದುವಾ ಆಶೀರ್ವಚನಗೈದರು, ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಮುಖಂಡ ರಫೀಕ್ ಮಾಸ್ಟರ್ ವಿಕಸನವಾಗಬೇಕಾದ ಸಮುದಾಯ ಎಂಬ ವಿಷಯ ಮಂಡಿಸಿದರು, ಮಾರಿಪ್ಪಳ್ಳ ಮಸೀದಿ ಖತೀಬ್ ಖಲೀಲುರ್ರಹ್ಮಾನ್ ದಾರಿಮಿ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ, ಎಸ್ಕೆಎಸಎಸ್ ದಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಮಸೀದಿ ಉಪಾಧ್ಯಕ್ಷ ಎಫ್.ಎ ಕಾದರ್, ಮೊಹಿದ್ದೀನ್ ಅಲ್ ಹಸನಿ, ಕೆರೀಮ್ ಉಸ್ತಾದ್, ಅಬೂಬಕರ್ ಮದನಿ ಮತ್ತಿತರರು ಉಪಸ್ಥಿತರಿದ್ದರು ಮಸೀದಿಯ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಖತೀಬ್ ಅಬ್ದುಲ್ ಲೆತೀಫ್ ಹನೀಫಿ ಮಜಲಿಸ್ ನ್ನೂರ್ ಗೆ ನೇತೃತ್ವ ನೀಡಿದರು, ವಿವಿಧ ಕಾಲೇಜ್ ನಲ್ಲಿ ಕುರಾನ್ ಹಾಫಿಲ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಾದ ಅಬೂಬಕ್ಕರ್ ಸಿದ್ದೀಕ್, ಮೊಹಮ್ಮದ್ ಝಿಯಾದ್, ಫಾರ್ಹನ್, ಸಲ್ಮಾನ್ ಫಾರಿಶ್ ರವನ್ನು ಹಾಗೂ ಮಸೀದಿ ಆಡಳಿತ ಸಮಿತಿ ಸದಸ್ಯರನ್ನು ಮತ್ತು ಗುತ್ತಿಗದಾರ ಶೈಖ್ ಮೊಹಮ್ಮದ್ ಫಾಝಿಲ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.