ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಮಾಲೂರು ಪಟ್ಟಣ್ಣದ ವಿ.ಕೆ.ಎಫ್ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ ಸಾರಥ್ಯ) ಹಾಗೂ ವಿಶ್ವಮಾನವ ಕುವೆಂಪು ಫೌಂಡೇಶನ್ ಕನ್ನಡ ಚಿತ್ರರಂಗದ ಮರೆಯಲಾಗದ ಅಕ್ಕರೆಯ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸುವ ಕಾರ್ಯವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಕೆ.ಮುನಿಕೃಷ್ಣಪ್ಪ (ಕೆ.ಮು.ಕೃ) ರವರು ಮಾತನಾಡಿ ಕರ್ನಾಟಕದಲ್ಲಿ ಕನ್ನಡ ನಾಡು ಅದ್ಬುತ ನಟನನ್ನು ಕಳೆದುಕೊಂಡಿದೆ. ಸಾವಿನಲ್ಲೂ ಸಹ ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿರುವ ನಮ್ಮ ಕನ್ನಡದ ಹೆಮ್ಮೆಯ ನಟನ ನಿಧನ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟ. ದೊಡ್ಮನೆಯ ಕೊಂಡಿ, ಕನ್ನಡದ ಪವರ್ ಸ್ಟಾರ್ ಎಂದೇ ಖ್ಯಾತಿ ಗಳಿಸಿದ್ದ ಪುನೀತ್ ರಾಜ್ ಕುಮಾರ್ ರವರನ್ನು ಕಳೆದುಕೊಂಡಿರುವುದು ಸಾಕಷ್ಟು ನಷ್ಟವೇ ಆಗಿದೆ” ಎಂದರು.
ಕಾರ್ಮಿಕ ಘಟಕದ ಅಧ್ಯಕ್ಷರಾದ ಸೈಯದ್ ನದೀಮ್ ರವರು ಮಾತನಾಡಿ “ಕನ್ನಡ ನಾಡು ಕಂಡ ಅದ್ಬುತ ನಟ, ಸಮಾಜಸೇವಕ ಪುನೀತ್ ರಾಜ್ ಕುಮಾರ್ ರವರು ಇಂದು ಇಲ್ಲ ಎಂಬುದು ಬಹಳ ದುಂಖಕರ ವಿಚಾರ, ಅವರ ಸೇವೆ ನಾಡಿನಲ್ಲಿ ಅಮರ” ಎಂದರು.
ಕರವೇ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಗಂಗಾಭವಾನಿ ರವರು ಮಾತನಾಡಿ “ಕನ್ನಡ ನಾಡು ಪ್ರೀತಿಯಿಂದ ಕರೆದ ನನ್ನ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ರವರು ಇಂದು ಇಲ್ಲ ಎಂಬುದು ನನಗೆ ಬಹಳ ದುಂಖ ತಂದಿದ್ದೆ. ಅವರ ಸಮಾಜಮುಖಿ ಸಂದೇಶಗಳು, ಚಲನಚಿತ್ರಗಳು ಇಂದಿನ ಪೀಳಿಗೆಗೆ ಬಹಳ ಹೆಚ್ಚು ಪ್ರಮುಖದ ಸಂದೇಶ ನೀಡಿದೆ. ನಾವು ಸಹ ಅವರ ಹೆಸರಿನಲ್ಲಿ ಸಮಾಜಕ್ಕೆ ಉತ್ತಮ ಸೇವೆ ಮಾಡೋಣಾ ಆ ಹಾದಿಯಲ್ಲಿ ಕರವೇ ಸಾಗಲಿ” ಎಂದರು.
ಪುನೀತ್ ರಾಜ್ಕುಮಾರ್ ರವರ ಅಪ್ಪಟ್ಟ ಅಭಿಮಾನಿ ಹಾಗೂ ಕರವೇ ಸಾಂಸ್ಕೃತಿಕ ಕಾರ್ಯದರ್ಶಿಯಾದ ಕೆ.ಟಿ.ಮುನಿರಾಜ್ (ಕೆ.ಟಿ.ಎಂ) ರವರು ಮಾತನಾಡಿ “ಕನ್ನಡ ಚಲನಚಿತ್ರ ರಂಗದಲ್ಲಿ ಇಂದು ಕಪ್ಪುದಿನ ಎಂದರೆ ತಪ್ಪಗಲಾರದು ಏಕೆಂದರೆ ಉತ್ತಮ ನಟ, ಬಡವರ ಸೇವಕನನ್ನು ಕಳೆದುಕೊಂಡ ನಮ್ಮ ಕನ್ನಡ ನಾಡು ಅನಾಥವಾಗಿದೆ, ಅಭಿಮಾನಿಗಳಿಗೆ ಬಹಳ ದುಂಖವಾಗಿದೆ” ಎಂದರು.
ಶ್ರದ್ದಾಂಜಲಿ ಸಲ್ಲಿಸುವಾಗ ಕರವೇ ಕೋಲಾರ ಜಿಲ್ಲಾ ಉಸ್ತುವಾರಿ ಹಾಗೂ ವಿ.ಕೆ.ಎಫ್ ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್, ಕಾರ್ಮಿಕ ಘಟಕದ ಅಧ್ಯಕ್ಷ ಸೈಯದ್ ನದೀಮ್, ಕ್ರೀಡಾ ಕಾರ್ಯದರ್ಶಿ ಅಕ್ರಂ, ಸಂಚಾಲಕರಾದ , ಕರವೇ ತಾಲ್ಲುಕು ಪ್ರಧಾನ ಕಾರ್ಯದರ್ಶಿ ಸೈಯದ್ ಇಮ್ರಾನ್, ಉಪಾಧ್ಯಕ್ಷರಾದ ಹರೀಶ್ ಕುಮಾರ್ ಎಸ್.ಜಿ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಗಂಗಾಭವನಿ, ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಕೋಡೂರ್ ಮಂಜುನಾಥ್.ಕೆ.ವಿ, ನಗರ ಘಟಕದ ಸಂಚಾಲಕರಾದ ಮೌಲಾ ಆಲಿ, ಕೆ.ಟಿ.ಮುನಿರಾಜ್, ಇತರರು ಹಾಜರಿದ್ದರು
ವರದಿ:ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.