ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದಲ್ಲಿ ಒಂದು ವಾರದಿಂದ ನಿರಂತರವಾಗಿ ಸುರಿದ ಮಳೆಯ ಪರಿಣಾಮದಿಂದ ತಾಲ್ಲೂಕಿನಲ್ಲಿ 60 ಕ್ಕೂ ಅಧಿಕ ಮನೆಗಳು ನೆಲಕ್ಕುರುಳಿದ್ದು, ಲಕ್ಕೂರಿನಲ್ಲಿ 14 ಮನೆಗಳು ನೆಲಕ್ಕೆ ಬಿದ್ದಿದ್ದು ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎಂಬುದು ಪತ್ರಿಕೆಗೆ ವರದಿಯಾಗಿದೆ.
ಲಕ್ಕೂರು ಗ್ರಾಮದ ಪೊಲೀಸ್ ಠಾಣೆ ಮುಂಭಾದಲ್ಲಿನ ಸುಬ್ರಮಣಿ ಹಾಗೂ ಭಾಗ್ಯಮ ರವರಿಗೆ ಸೇರಿದ ಮನೆ, ಶಫೀಉಲ್ಲಾಖಾನ್ ಎಂಬುವರಿಗೆ ಸೇರಿದ ಮನೆ, ದಲಿತ ಕಾಲೋನಿಯ ಕಿಟ್ಟಮ್ಮ, ಕಿಟ್ಟಪ್ಪ ರವರ ಮನೆ, ಪದಮ್ಮ ಹಾಗೂ ನಾರಾಯಣಸ್ವಾಮಿ ರವರ ಮನೆ, ನಾಡಕಚೇರಿ ರಸ್ತೆಯಲ್ಲಿ ಶ್ರೀಧರ್ ರೆಡ್ಡಿ ಮನೆ ಪಕ್ಕದ ಮುಸ್ಲಿಂ ಸಮುದಾಯದವರ ಮನೆ, ಶನಿಮಹಾತ್ಮ ಕಾಲೋನಿಯಲ್ಲಿ ಒಟ್ಟಾರೆ 4 ಮನೆಗಳು, ಹಾಗೂ ವಿವಿಧ ಭಾಗಗಳಲ್ಲಿ ಒಟ್ಟಾರೆ 14 ಮನೆಗಳು ಮಳೆಯ ಪರಿಣಾಮದಿಂದಾಗಿ ಧರೆಗೆ ಬಿದ್ದಿರುವುದು ಬಾರಿ ನಷ್ಟ ಸಂಭವಿಸಿದೆ.
*ಈ ಬಗ್ಗೆ ಪತ್ರಿಕೆ ಜೊತೆಗೆ ಮಾತನಾಡಿದ ಮಾಲೂರು ತಾಲ್ಲೂಕು ದಂಡಾಧಿಕಾರಿಗಳಾದ ರಮೇಶ್ ರವರು ಮಾತನಾಡಿ “ನಿರಂತರ ಮಳೆಯ ಕಾರಣದಿಂದಾಗಿ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಮನೆಗಳು ನೆಲಕ್ಕೆ ಉರುಳಿರುವ ಕಾರಣ ಆ ಕುಟುಂಬದವರಿಗೆ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಸಂಪೂರ್ಣ ಮನೆ ಬಿದ್ದಿದ್ದರೆ 95 ಸಾವಿರ ಸಹಾಯಧನ ಹಾಗೂ ಮನೆ ಗೋಡೆ ಬಿದಿದ್ದರೆ 4-5 ಸಾವಿರ ನೀಡಲು ಅವಕಾಶ ಇರುವುದರಿಂದ ನಿಮ್ಮೂರಿನಲ್ಲಿ ಇಂತಹ ಘಟನೆ ಸಂಭವಿಸಿದಾಗ ನಿಮ್ಮೊಂದಿಗೆ ಭಾಗದ ಅಧಿಕಾರಿಗಳನ್ನು ಸಂಪರ್ಕಿಸಿದರೆ ನಾವು ಸರ್ಕಾರದಿಂದ ಸೀಗುವ ಸೌಲಭ್ಯ ಒದಗಿಸಿ ಕೋಡಲು ಹಾಗೂ ಸಹಾಯಕ್ಕೆ ಬರಲು ಸಿದ್ದ” ಎಂದರು.
ಲಕ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚೇತನ್ ಗೌಡ ರವರು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಹಾಗೂ ನಮ್ಮಿಂದಾಗುವ ಸಹಕಾರವನ್ನು ನೀಡುವ ಮೂಲಕ ಸಹಕಾರಿಸುವುದಾಗಿ” ತಿಳಿಸಿದ್ದಾರೆ.
ಮನೆಗಳು ಬಿದ್ದ ಮಾಹಿತಿ ಆಧಾರಿಸಿ ಪರೀಶಿಲನೆ ನಡೆಸಲು ಇಂದು ಬೆಳಿಗ್ಗೆ ಲಕ್ಕೂರು ಗ್ರಾಮದ ಗ್ರಾಮಲೆಕ್ಕಿಗರಾದ ಅಮರ್ ಶಂಕರ್, ಪಂಚಾಯಿತಿಯ ಶ್ರೀನಾಥ್, ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ್ ರೆಡ್ಡಿ, ಭೇಟಿ ನೀಡಿ ಪರಿಶೀಲಿಸಿ ತಹಶೀಲ್ದಾರ್ ರವರಿಗೆ ಮಾಹಿತಿಯನ್ನು ತಲುಪಿಸಿದ್ದಾರೆ.
ಈ ಬಗ್ಗೆ ವಿಶ್ವಮಾನವ ಕುವೆಂಪು ಫೌಂಡೇಶನ್ ಹಾಗೂ ಕರವೇ (ಹೆಚ್.ಶಿವರಾಮೇಗೌಡ ಸಾರಥ್ಯ) ಮಾನ್ಯ ಜಿಲ್ಲಾಧಿಕಾರಿಗಳಿಗೆ, ಸಂಸದರಿಗೆ, ಹಾಗೂ ಶಾಸಕರಿಗೆ ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಸರ್ಕಾರದ ಮಟ್ಟದಲ್ಲಿ 5 ಲಕ್ಷ ಪರಿಹಾರ ಘೋಷಿಸುವ ಮೂಲಕ ಅವರ ಕಷ್ಟಕ್ಕೆ ಸ್ಪಂದಿಸಬೇಕಾಗಿ ಮನವಿ ಮಾಡುತ್ತಿದ್ದೆ.
ವರದಿ: ಲಕ್ಕೂರು ಎಂ.ನಾಗರಾಜ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.