ಜೆದ್ದಾ(www.vknews.in): ಕರೋನಾ ವೈರಸ್ ರೂಪಾಂತರವಾದ ಓಮಿಕ್ರಾನ್ ಪ್ರಕರಣವು ಸೌದಿಯಲ್ಲಿ ಪತ್ತೆಯಾಗುವುದರೊಂದಿಗೆ ರಾಷ್ಟ್ರದಲ್ಲಿರುವ ಎಲ್ಲಾ ನಾಗರೀಕರು ಹಾಗೂ ವಿದೇಶಿಗಳಿಗೆ ಮೂರನೇ ‘ಬೂಸ್ಟರ್’ ಡೋಸ್ ಕಡ್ಡಾಯವಾಗಿ ಪಡೆಯಬೇಕೆಂದು ಸೌದಿ ಆರೋಗ್ಯ ಸಚಿವಾಲಯ ಆದೇಶಿಸಿದೆ.
ಎರಡನೇ ಡೋಸ್ ಪಡೆದ ಎಂಟು ತಿಂಗಳೊಳಗಾಗಿ ಪ್ರತಿಯೊಬ್ಬರೂ ಮೂರನೇ ಡೋಸ್ ಪಡೆಯುವಂತೆಯೂ, ತಪ್ಪಿದಲ್ಲಿ ತವಕ್ಕಲ್ನಾ ಆ್ಯಪ್ ನಲ್ಲಿ ‘ಇಮ್ಯೂನ್’ ಸ್ಟೇಟಸ್ ರದ್ದುಗೊಳಿಸಲಾಗುವುದು. ಮಾತ್ರವಲ್ಲ ಇಂತವರಿಗೆ ಶಾಫಿಂಗ್ ಮಾಲ್, ಸೂಪರ್ ಮಾರ್ಕೆಟ್, ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶವನ್ನು ನಿಷೇಧಿಸಲಾಗುವುದೆಂದೂ ಆರೋಗ್ಯ ಇಲಾಖೆ ಎಚ್ಚರಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.