ಸಕಲೇಶಪುರ (www.vknews.com) : ಪಟ್ಟಣದ ಸೂಪರ್ ಬಝಾರ್ ಅಂಗಡಿ ವಿರುದ್ಧದ ಪ್ರಕರಣಕ್ಕೆ ಸಂಬಂದಿಸಿದಂತೆ, ಇದು ‘ಲವ್ ಜಿಹಾದ್’ ಅಲ್ಲ ‘ಪ್ಯಾರ್ ಅಂಡ್ ಲವ್ಲಿ ನೂ ಅಲ್ಲ, ಓನ್ಲೀ ಮಿಸಿಂಗ್ ಕೇಸ್ ಎಂದು ಯುವತಿಯ ಕುಟುಂಬದ ಪ್ರಮುಖರು ಸ್ವಷ್ಟನೆ ನೀಡಿದ್ದಾರೆ.
ಪಟ್ಟಣದ ಸೂಪರ್ ಬಝಾರ್ ಅಂಗಡಿ ಮಾಲೀಕ ಹನಿಟ್ರಾö್ಯಪ್ ಮೂಲಕ ಹಿಂದೂ ಹುಡುಗಿಯರನ್ನು ಅನ್ಯಧರ್ಮಕ್ಕೆ ಸೇಳೆಯುತ್ತಿದ್ದಾರೆಂದು ಭಜರಂಗದಳದ ಕಾರ್ಯಕರ್ತರು ಆರೋಪಿಸಿ ಅಂಗಡಿಗೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು. ಈ ಪ್ರಕರಣ ಕ್ಕೆ ಸಂಬಂದಿಸಿದಂತೆ ಯುವತಿಯ ಕುಟುಂಬ ಪತ್ರಿಕೆಯೊಂದಿಗೆ ಮಾತನಾಡಿ, ಸಣ್ಣ ಕಾರಣಕ್ಕಾಗಿ ತನ್ನ ಸ್ನೇಹಿತೆಯ ಮನೆಗೆ ಹೊಗಿದ್ದಳು. ನಾವು ಮಿಸಿಂಗ್ ದೂರು ಪಟ್ಟಣ ಠಾಣೆಗೆ ನೀಡಿದ್ದೇವು ಅಷ್ಟೇ ಎಂದು ಹೇಳಿದರು.
ಗುರುವಾರ ಪ್ರತಿಭಟನೆ ನಡೆಸಿದ ಭಜರಂಗದಳದ ಕಾರ್ಯಕರ್ತರು, ಕಡಿಮೆ ದರದಲ್ಲಿ ಸಾಮಾಗ್ರಿ ನೀಡುವ ಭರವಸೆಯ ಮೂಲಕ ಹಿಂದೂಗಳಿಂದಲೇ ನಿತ್ಯ ವ್ಯಾಪಾರಗಳಿಸುವ ಅಂಗಡಿ ಮಾಲೀಕ, ತನ್ನ ಅಂಗಡಿಗೆ ಕೆಲಸಕ್ಕೆ ಹಿಂದೂ ಹುಡುಗಿಯರನ್ನು ನೇಮಿಸಿಕೊಂಡು ಅವರನ್ನು ತನ್ನ ಅಂಗಡಿಯಲ್ಲಿ ಕೆಲಸ ಮಾಡುವ ಅನ್ಯಧರ್ಮದ ಯುವಕರೊಂದಿಗೆ ಪ್ರೀತಿಯಲ್ಲಿ ಬೀಳುಸುವ ಮೂಲಕ ಅವರನ್ನು ಕೇರಳ ರಾಜ್ಯಕ್ಕೆ ಕಳುಹಿಸಿ ಮದುವೆ ಮಾಡಿಸುವುದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಯುವತಿ ಮನೆ ತೊರದಿದ್ದ ಮೂರು ದಿನದ ನಂತರ ಈ ವಿಚಾರವನ್ನು ತಿಳಿದು ಬಜಗಂಗದಳದ ಕಾರ್ಯಕರ್ತರು ಮಿಸಿಂಗ್ ಪ್ರಕರಣವನ್ನು ತಮ್ಮ ಭಾಷೆಯಲ್ಲಿ ತಿರುಚಿ ಲವ್ ಜಿಹಾದ್ ಎಂದು ನಾಮಕರಣ ಮಾಡಿಕೊಂಡು ಗುರುವಾರ ಬೆಳಗ್ಗೆ ಅಂಗಡಿ ಮುಂದೆ ಬಂದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರ ಗ್ಯಾಂಗ್ ನ ಕೆಲವರು ವಿಡಿಯೋ ಮಾಡಿ ಸಮಾಜ ಜಾಲತಾಣಗಳಲ್ಲಿ ಹರಿಬಿಟ್ಟರು, ಅಂಗಡಿಯ ಬಡ ಕಾರ್ಮಿಕ ಒಬ್ಬನಿಗೆ ಹಲ್ಲೆ ನಡೆಸಿದ್ದರು.
ಪಟ್ಟಣದ ಪೊಲೀಸರು ಸ್ಥಳಕ್ಕೆ ಹಾಜರಾಗಿ ಕೋಮುವಾದಿ ಸಂಘಟನೆಗಳ ಮನವಿಯನ್ನು ಆಲಿಸಿ ಯುವಕ ಯುವತಿಯನ್ನು ಠಾಣಾಗೆ ಕರೆದು ಅವರ ಹೇಳಿಕೆ ಪಡೆದು ಯುವತಿಯನ್ನು ಯುವತಿ ಮನೆಗೆ ಕಳಿಸಿಕೊಟ್ಟರು. ಸದ್ಯಕ್ಕೆ ಪ್ರಕರಣ ಇಲ್ಲಿಗೆ ಇತಿಶ್ರೀ ಹಾಡಿದೆ.
ಅಂಗಡಿಯ ಮಾಲೀಕ ಸಕಲೇಶಪುರ ಕಂಡ ಸಬ್ಯ ಉದ್ದಿಮೆದಾರರಲ್ಲಿ ಒಬ್ಬರು. ಇವರ ನೆನ್ನೆ ಮೊನ್ನೆ ವ್ಯಾಪಾರಸ್ಥರಲ್ಲ. ಅವರ ತಂದೆಯೂ ಸಹ ಊರಿನ ಸಭ್ಯ ಉದ್ದಿಮೆದಾರರಲ್ಲಿ ಒಬ್ಬರಾರಾಗಿದ್ದರು. ಮಾನ ಮರ್ಯಾದೆ ಗೌರವದಿಂದ ಉದ್ದಿಮೆಯನ್ನು ಸ್ಥಾಪಿಸಿ ಜನರ ವಿಶ್ವಾಸವನ್ನು ಗಳಿಸಿದ್ದರು. ಇವರ ಅಂಗಡಿಯಲ್ಲಿ ಇಲ್ಲಿಯವರೆಗೆ ನೂರಾರು ಜನ ಕೆಲಸ ಮಾಡಿದ್ದಾರೆ ಕೆಲಸ ಬೇಡಿಕೊಂಡು ಬರುವವರಿಗೆ ಸಣ್ಣದಾದ ಪರೀಕ್ಷೆ ಮಾಡಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ, ಎಲ್ಲಿ ಹನಿಟ್ರ್ಯಾಪ್ ಮಾಡಲು ಅಥವಾ ಏಕಾಂತದಲ್ಲಿ ಯುವಕ ಯುವತಿ ಮಾತನಾಡಲು ಅವಕಾಶವೇ ಇಲ್ಲ. ಸಿಸಿ ಕ್ಯಾಮರಾ ಕಣ್ಣುಗಳು ಎಲ್ಲರನ್ನು ಚಿತ್ರೀಕರಿಸುತ್ತವೆ. ಕ್ಯಾಮರ ಕಣ್ಣು ತಪ್ಪಿಸಲು ಯಾರಿಂದಲು ಸಾಧ್ಯವಾಗುವುದಿಲ್ಲ. ಇಂತಹ ಹದ್ದಿನ ಕಣ್ಣಿನ ನಡುವೆ ಕೆಲಸ ಮಾಡಬೇಕಾಗುತ್ತದೆ ಊರಿನ ಜನ ಸೂಪರ್ ಬಝಾರ್ ಮಾಲಿಕನ ಬಗ್ಗೆ ಹಾಗೂ ಅವರ ತಂದೆಯ ಬಗ್ಗೆ ಅನೇಕರು ಶ್ಲಾಘನೀಯವಾಗಿ ಮಾತನಾಡುತ್ತಾರೆ. ಇವರ ಮತ್ತೊಬ್ಬ ಸಹೋದರನ ವ್ಯವಹಾರದ ಬಗ್ಗೆ ಅನೇಕ ತಕರಾರು ಆಕ್ಷೇಪಣಿಯ ಮಾತುಗಳನ್ನು ಆಡುತ್ತಾರೆ. ಭಜರಂಗದಳದ ಕಾರ್ಯಕರ್ತರು ದುರುದ್ದೇಶದಿಂದ ಈ ಪ್ರಕರಣವನ್ನು ತಿರುಚಿ ಲವ್ ಜಿಹಾದ್ ಎಂದು ಹೇಳಿ ಊರಿನಲ್ಲಿ ವಿವಾದ ಸೃಷ್ಟಿಸಲು ಮುಂದಾಗಿದ್ದಾರೆ. ಸಕಲೇಶಪುರ ಜನ ಸಭ್ಯರು ಹಾಗೂ ಬುದ್ದಿವಂತರು. ಇವರ ಯಾವುದೇ ಕುತಂತ್ರಕ್ಕೆ ಒಳಗಾಗುವುದಿಲ್ಲ. ಇದೊಂದು ಮಿಸಿಂಗ್ ಪ್ರಕರಣ ಇವರ ಕೊಮುವಾದಿ ತೆವಳಿಗೆ ಯುವತಿಯ ಮಾನ ಹರಾಜಾ ಮಾಡುತ್ತಿದ್ದಾರೆ. @ಮೋಹನ್ ವಕೀಲರು ಸಕಲೇಶಪುರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.