ಸಚಿವರಿಗೊಂದು ಸಾರ್ವಜನಿಕರೊಂದು ನಿಯಮವೇ ?
ಬೆಳಗಾವಿ (ವಿಶ್ವ ಕನ್ನಡಿಗ ನ್ಯೂಸ್) : ರಾಜ್ಯದಲ್ಲಿ ಕೊವಿಡ್-19 ನಿಯಮಗಳಲ್ಲಿ ಶ್ರೀಮಂತರಿಗೆ, ರಾಜಕಾರಣಿಗಳಿಗೆ ಹಾಗು ಬಡವರಿಗೆ ವ್ಯತ್ಯಾಸ ಇದೆಯಾ ಎಂಬ ಅನುಮಾನ ಶುರುವಾಗಿದೆ.
ಬೆಳಗಾವಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣದ ಬಗ್ಗೆ ಉಲ್ಲೇಖಿಸಿರುವ ಅರಣ್ಯ ಸಚಿವ ಉಮೇಶ್ ಕತ್ತಿ, “ನಿನ್ನೆ ರಾತ್ರಿ ಪ್ರಧಾನಮಂತ್ರಿಗಳು ಹೇಳಿದ್ದಾರೆ. ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ. ಸಾರ್ವಜನಿಕರು ತಮ್ಮ ಸ್ವಂತ ಬುದ್ಧಿಯಿಂದ ಮಾಸ್ಕ್ ಹಾಕಿಕೊಳ್ಳಬೇಕು, ಮಾಸ್ಕ್ ಹಾಕಿಕೊಳ್ಳುವುದು ಬಿಡುವುದೂ ಆ ಮನುಷ್ಯನಿಗೆ ಬಿಟ್ಟಿದ್ದು. ಆ ಮೇಲೆ ನನಗೂ ಬಿಟ್ಟಿದ್ದು. ನನಗೆ ಮಾಸ್ಕ್ ಹಾಕಿಕೊಳ್ಳಬೇಕು ಅಂತಾ ಅನಿಸಿಲ್ಲ ಹಾಗಾಗಿ ಮಾಸ್ಕ್ ಹಾಕಿಕೊಂಡಿಲ್ಲ, ಏನೂ ತೊಂದರೆ ಇಲ್ಲ,” ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಸಂಪುಟದಲ್ಲಿರುವ ಅರಣ್ಯ ಸಚಿವರೇ ಸಾರ್ವಜನಿಕವಾಗಿ ಮಾಸ್ಕ್ ಧರಿಸುವುದರ ಬಗ್ಗೆ ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ. ಸಾರ್ವಜನಿಕರು ಹಾಗೂ ಕೊರೊನಾ ವಾರಿಯರ್ಸ್ ಆಗಿ ಹೋರಾಡಿದ ವೈದ್ಯರಿಗೆ ವಿಧಿಸುವ ಕಠಿಣ ನಿಯಮಗಳು ಸಚಿವರಿಗೆ ಅನ್ವಯವಾಗುವುದಿಲ್ಲವೇ ಎಂಬ ಪ್ರಶ್ನೆ ಸಾರ್ವಜಕರಲ್ಲಿ ಮೂಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.