(ವಿಶ್ವ ಕನ್ನಡಿಗ ನ್ಯೂಸ್) : ಪಶ್ಚಿಮ ಬಂಗಾಳದ ಸಂದೀಪನ್ ಸರ್ಕಾರ್ ಮತ್ತು ಅದಿತಿ ದಾಸ್ ಜನವರಿ 24 ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಜೋಡಿಯು ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಬೇಕು ಎಂದುಕೊಂಡಿದ್ದರು, ಆದರೆ ಪದೇಪದೇ ಹಲವಾರು ನಿಯಮಗಳು ಅಡ್ಡಿ ಮಾಡಿದ ಕಾರಣ, ಇವರ ತಲೆಯಲ್ಲಿ ಹೊಸ ಐಡಿಯಾ ಒಂದು ಹೊಳೆದಿದೆ.
ಅದರಂತೆ ಆಯ್ದ 450 ಸಂಬಂಧಿಕರ ಸಮ್ಮುಖದಲ್ಲಿ ಗೂಗಲ್ ಮೀಟ್ ಮೂಲಕ ಈ ಜೋಡಿ ಜನವರಿ 24ರಂದು ಸಪ್ತಪದಿ ತುಳಿಯಲಿದ್ದಾರೆ. ವಿಶೇಷ ಅಂದರೆ ಅಂದು ಮದುವೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಝೋಮ್ಯಾಟೋ ಮೂಲಕ ಮದುವೆಯ ಊಟ ಕಳಿಸಲು ಕೂಡ ಈ ಜೋಡಿ ಈಗಾಗಲೇ ಸಿದ್ಧತೆ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.