(ವಿಶ್ವ ಕನ್ನಡಿಗ ನ್ಯೂಸ್) : ಪವಿತ್ರ ರಂಜಾನ್ ತಿಂಗಳು ಯುಎಇಯಾದ್ಯಂತ ಆಧ್ಯಾತ್ಮಿಕತೆಯ ಭಾವವನ್ನು ತರುತ್ತದೆ. ಮುಸ್ಲಿಮರು ಹಗಲಿನಲ್ಲಿ ಆಹಾರ ಮತ್ತು ನೀರನ್ನು ತ್ಯಜಿಸುವುದರಿಂದ ಶಾಲೆ ಮತ್ತು ಕಚೇರಿಯ ಸಮಯವನ್ನು ಸಡಿಲಗೊಳಿಸಲಾಗುತ್ತದೆ.
ಖಗೋಳಶಾಸ್ತ್ರಜ್ಞರ ಪ್ರಕಾರ, ಈ ವರ್ಷ ರಂಜಾನ್ ಏಪ್ರಿಲ್ 2 ರಿಂದ 30 ದಿನಗಳವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರರ್ಥ ಮೇ 2 ಈದ್ ಅಲ್ ಫಿತ್ರ್ ಹಬ್ಬ ಸಾಧ್ಯತೆ ಇದೆ.
ಖಗೋಳವಿಜ್ಞಾನ ಮತ್ತು ಬಾಹ್ಯಾಕಾಶ ವಿಜ್ಞಾನಗಳ ಅರಬ್ ಒಕ್ಕೂಟದ ಸದಸ್ಯ ಇಬ್ರಾಹಿಂ ಅಲ್ ಜರ್ವಾನ್ ಕೂಡ ಪವಿತ್ರ ತಿಂಗಳಲ್ಲಿ ಉಪವಾಸದ ಸಮಯವನ್ನು ಬಹಿರಂಗಪಡಿಸಿದ್ದಾರೆ. ತಿಂಗಳ ಪ್ರಾರಂಭದಲ್ಲಿ ಉಪವಾಸದ ಸಮಯ 13 ಗಂಟೆ 40 ನಿಮಿಷಗಳು, ತಿಂಗಳು ಮುಗಿಯುವ ಹೊತ್ತಿಗೆ ಇದು 14 ಗಂಟೆ 20 ನಿಮಿಷಗಳಿಗೆ ಹೆಚ್ಚಾಗುತ್ತವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.