ಪುತ್ತೂರು (www.vknews.com) : ಪುತ್ತೂರು ತಾಲೂಕಿನ ಕೆಯ್ಯುರ್ ಗ್ರಾಮದ ವಾಲೆಮುಂಡೋವ್ ಸಮೀಪದ ಸೊರಕೆ ಎಂಬಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಅಭಾವವನ್ನು ಮನಗಂಡು SDPI ಕೆಯ್ಯುರು ಗ್ರಾಮ ಸಮಿತಿಯು ದಾನಿಗಳ ಮತ್ತು ಪಕ್ಷದ ಕಾರ್ಯಕರ್ತರ ನೆರವಿನಿಂದ ಕೊಳವೆ ಬಾವಿಯನ್ನು ಕೊರೆದು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೈಯ್ಯಲಾಯಿತು.
SDPI ಪುತ್ತೂರು ವಿಧಾನ ಸಭಾ ಕ್ಷೆತ್ರ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಸಾಗರ್ ರವರು ಕೆಯ್ಯುರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಭಂಡಾರಿ ರವರರಿಗೆ ಹಸ್ತಾಂತರಿಸುವ ಮೂಲಕ ಲೋಕಾರ್ಪಣೆಗೈದರು. ಈ ಸಂದರ್ಭದಲ್ಲಿ ಕೆಯ್ಯೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಬ್ರಮಣ್ಯ, SDPI ಬೆಂಬಲಿತ ಪಂಚಾಯತ್ ಸದಸ್ಯರಾದ ನೆಬಿಸ ಕೆಯ್ಯುರು , ಪಂಚಾಯತ್ ಸದಸ್ಯರುಗಳಾದ ಬಟ್ಟಿಯಪ್ಪ ರೈ,A. K. ಅಬ್ದುಲ್ ಖಾದರ್ ಮೇರ್ಲ, ಅಮಿತ ರೈ, SDPI ಕುಂಬ್ರ ಬ್ಲಾಕ್ ಅಧ್ಯಕ್ಷರಾದ ಶರೀಫ್ ಕಟ್ಟತ್ತಾರು,ಓಲೆಮುಂಡೇವು ಬೂತ್ ಅಧ್ಯಕ್ಷರಾದ ಸಮದ್,ಕೆಯ್ಯುರು ಗ್ರಾಮ ಸಮಿತಿ ಸದಸ್ಯರಾದ ಉಮ್ಮರ್ B. M. ಹರಿನಾಥ್ ರೈ , ವಿಶ್ವನಾಥ್ ಮತ್ತು ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.