ಮಂಗಳೂರು (www.vknews.com) : ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಬುಧವಾರ ಅನ್ ಲೈನ್ ಮೂಲಕ 73ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ದೇಶ- ವಿದೇಶಗಳ ಅನೇಕ ಗಣ್ಯರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಯುವ ವಾಗ್ಮಿ , ಖ್ಯಾತ ಅಂಕಣಕಾರದ ಕಿರಣಕುಮಾರ ವಿವೇಕವಂಶಿ ಚಿಲ್ಲೂರ ಹಾಗೂ ಬಾಲ ಪ್ರತಿಭೆ ಮನಸ್ವಿ ಕುಲಾಲ್ ನಿಟ್ಟೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರೂ ಮೆಚ್ಚುಗೆ ಪಡೆಯಿತು. ಆಧ್ಯ ಕಾನುಬೈಲು ಡಿ , ಅನುಷ್ಕಾ ಆರ್.ಟಿ , ನಿರಂಜನ್ ಜೈನ್ ಕುದ್ಯಾಡಿ, ಪ್ರಾಪ್ತಿ ಪುಣೆ, ದೀಕ್ಷಿತ್ ಆರ್.ಜೆ ಉಪ್ಪುಂದ, ಮೌಲ್ಯ ವೈ. ಮೂಡುಬಿದಿರೆ, ಸುಶ್ಮಿತಾ ಡಿ, ಹೊರನಾಡು, ನಿತ್ಯ ಡಿ.ಹೊರನಾಡು, ಚಿಂತನಾ ಡಿ.ಹೊರನಾಡು, ಮನಸ್ವಿ ಡಿ.ಹೊರನಾಡು ಹಾಗೂ ವಿಶಾರದ ನೃತ್ಯ ಶಾಲೆ ಬೆಳಗಾವಿಯ ವಿದ್ಯಾರ್ಥಿಗಳಾದ ಮಾನ್ಯ,ತನ್ವಿ, ಅಖಿಲಾ , ದಿಯಾ,ಮೃದು, ಅರ್ಪಿತಾ, ಅಪೂರ್ವ, ಆರಾಧನಾ, ಶ್ರಾವಣಿ, ರಾಧಿಕಾ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿದೇಶದಲ್ಲಿ ನೆಲೆಸಿರುವ ಮೂಲತಃ ಕರ್ನಾಟಕದವರು ಆಗಿರುವ ದುಬೈಯಿಂದ ದೇವಕುಮಾರ್ ಕಂಬ್ಳಿ, ಸಂದೇಶ ಅಂಗಡಿಬೆಟ್ಟು, ಜರ್ಮನಿಯಿಂದ ಸೌಮ್ಯ ಜಿತೇಂದ್ರ ಕುಮಾರ್, ವಿಜಯ ಕುಮಾರ್, ಲಂಡನ್ ನಿಂದ ಅಶ್ವಿನಿ ಪ್ರಭು, ಅಮೇರಿಕಾ ದಿಂದ ಅರ್ಚನಾ, ಶಿಲ್ಪಾ , ಕೆನಡಾ ದಿಂದ ರಾಜುಗೌಡ ಪಾಟೀಲ, ಶ್ರೀಲಂಕಾ ದಿಂದ ಅಶ್ವತ್ ಕುಮಾರ್, ಕೊರಿಯಾ ದಿಂದ ಕಿಶೋರ್ ಉಪಸ್ಥಿತರಿದ್ದರು ಶುಭಹಾರೈಸಿದರು.
ಎನ್ ಪ್ರಸನ್ನ ಕುಮಾರ್ ಮೈಸೂರು, ಪ್ರೇಮಾ ಶಾಂತಿನಾಥ ಉಪಾಧ್ಯೆ ಬೆಳಗಾವಿ, ಜಯಶ್ರೀ ಡಿ ಜೈನ್ ಹೊರನಾಡು, ನೀತಾ ಜೈನ್ ಪುಣೆ, ನಾಗಶ್ರೀ ಮುಪ್ಪನೆ ಬೆಂಗಳೂರು , ಅಕ್ಷಯ್ ಜೈನ್ ಕೆರ್ವಾಸೆ, ಅರ್ಚಿತ್ ಎ. ಜೈನ್ ಸಂಸೆ ಮೊದಲಾದವರು ಉಪಸ್ಥಿತರಿದ್ದರು .
ಪ್ರಿಯದರ್ಶಿನಿ ಜೈನ್ ಮಂಗಳೂರು ನಿರೂಪಿಸಿದರು. ಸುದೇಶ್ ಜೈನ್ ಮಕ್ಕಿಮನೆ ಸಂಯೋಜಿಸಿದ್ದರು. ನಿರಂಜನ್ ಜೈನ್ ಕುದ್ಯಾಡಿ, ಆದ್ಯ ಕಾನುಬೈಲು ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.