ವಿ.ಕೆ.ನ್ಯೂಸ್ (ಮಾಲೂರು):ಏಷ್ಯಯನ್ ಬುಕ್ ಆಫ್ ವರ್ಡ್ ರೆಕಾರ್ಡ್ ಮಾಡಿ ಗ್ರ್ಯಾಂಡ್ ಮಾಸ್ಟರ್ ಬಿರುದಾಂಕಿತ, ಕರ್ನಾಟಕ ಸಾಧಕರ ಪುಸ್ತಕದಲ್ಲಿನ ಮುದ್ರೆ ಒತ್ತಿರುವ ಸೂಪರ್ ಮೆಮೋರಿ ಕಿಡ್ ಕಂದ, ಎರಡು ಬಾರಿ ಇಂಡಿಯನ್ ಬುಕ್ ಆಫ್ ವರ್ಡ್ ರೆಕಾರ್ಡ್ ಮಾಡುವ ಮೂಲಕ ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವ ಕೇವಲ ಮೂರು ವರ್ಷ ಎಂಟು ತಿಂಗಳ ಗ್ರಾಮೀಣ ಪ್ರದೇಶದ ರಾಷ್ಟ್ರಮಟ್ಟದ ಸಾಧಕ ಗ್ರ್ಯಾಂಡ್ ಮಾಸ್ಟರ್ ತಾನೀಶ್ ಗೆ ಕರಾಟೆಯಲ್ಲಿ ಆರೆಂಜ್ ಬೆಲ್ಟ ಪಡೆಯುವ ಮೂಲಕ ಮತ್ತೊಂದು ಮಹತ್ತರ ಸಾಧನೆ ಮಾಡುವ ಮೂಲಕ ಮುಖ್ಯವಾಹಿನಿಯಲ್ಲಿರುವುದು ಮಾಲೂರು ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದೆ.
ಏಳು ರಾಷ್ಟ್ರ ಮಟ್ಟದ ದಾಖಲೆಗಳ ಸರದಾರ ತಾನೀಶ್.ಎನ್ ಗೆ ಮಾಲೂರಿನ ಹೋಂಡಾ ಸ್ಟೇಡಿಯಂನಲ್ಲಿನ ಶಾಲಿಂಗ್-ಜೂ-ಕುಂಗ್-ಪೂ ತರಬೇತಿ ಶಾಲೆಯಲ್ಲಿನ ಕರಾಟೆ ತರಬೇತುದಾರರಾದ ಮಂಜುನಾಥ್ ರವರು ಮಾತನಾಡುತ್ತಾ ” ತಾನೀಶ್.ಎನ್ ಈಗಾಗಲೇ ಅಂತರಾಷ್ಟ್ರೀಯ ಮಟ್ಟ, ರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡು, ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಢಿಸಿ ಎಲ್ಲಾ ಸಾರ್ವಜನಿಕರ ಮನೆಮಾತಾಗಿದ್ದಾನೆ. ಕರಾಟೆ ಕ್ಷೇತ್ರದಲ್ಲಿನ ಇವನ ಸಾಧನೆ, ಉತ್ತಮ ಪ್ರದರ್ಶನ ಅಪರೂಪದ ಪುಟ್ಟ ಮಾಣಿಕ್ಯನೇ ಸರಿ. ಇವನಿಗೆ ಈಗಾಗಲೇ 2 ವರ್ಷ 6 ತಿಂಗಳಲ್ಲಿ ಕರಾಟೆಯಲ್ಲಿ ಯೇಲೋ ಬೆಲ್ಟ ಪಡೆದ ರಾಜ್ಯದ ಅತ್ಯಂತ ಕಿರಿಯ ಮಗು ಆಗಿದ್ದಾನೆ. ಈಗ ಇವನಿಗೆ ಮತ್ತೆ ಕರಾಟೆಯಲ್ಲಿ ಉತ್ತಮ ಪ್ರದರ್ಶನದ ಹಂತ ಪೂರೈಸಿದ ಕಾರಣ ಆರೆಂಜ್ ಬೆಲ್ಟ್, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ” ಎಂದರು.
ಕರಾಟೆಯಲ್ಲಿ ಮಹತ್ತರ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಗ್ರ್ಯಾಂಡ್ ಮಾಸ್ಟರ್ ತಾನೀಶ್.ಎನ್ ರವರ ಪೋಷಕರು, ಶ್ವೇತಾಂಜಲಿ ಭರತನಾಟ್ಯ ಶಾಲೆ ಹಾಗೂ ವಿಶ್ವಮಾನವ ಕುವೆಂಪು ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ಮಾತನಾಡಿ “ನಮ್ಮ ಕೋಲಾರ ಜಿಲ್ಲೆಯಲ್ಲಿ ಬಹಳಷ್ಟು ಎತ್ತರ ಮಟ್ಟದಲ್ಲಿ ಹೆಸರುಗಳಿಸಿರುವ ಕರಾಟೆ ಮಾಸ್ಟರ್ ಮಂಜುನಾಥ್ ರವರ ಗರಡಿಯಲ್ಲಿ ಎರಡು ವರ್ಷದ ಮಗುವಿನಿಂದ ಕರಾಟೆ ಕ್ಷೇತ್ರದಲ್ಲಿ ಗುರುಗಳ ಆಶಿರ್ವಾದದ ಮೂಲಕ ಕಲಿಯುತ್ತಿದ್ದಾನೆ, ಈಗಾಗಲೇ ಯೇಲೋ ಬೆಲ್ಟ್ ಪಡೆದಿದ್ದು ಮತ್ತೆ ಮತ್ತೊಂದು ಅರೆಂಜ್ ಬೆಲ್ಟ್ ಪಡೆದು ಉತ್ತಮ ಸಾಧನೆಯ ಪಥದ ಕಡೆ ಸಾಗುತ್ತಿರುವುದು ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮಾಲೂರಿನ ಹೆಸರನ್ನು ವಿಶ್ವ ಮಟ್ಟಕ್ಕೆ ಪಸರಿಸಿರುವ ನಮ್ಮ ಮಗುವಿನ ಬಗ್ಗೆ ನಮಗೆ ಬಹಳ ಹೆಮ್ಮೆ” ಎಂದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.