(www.vknews.in) : ಮುಸ್ಲಿಂ ವಿದ್ಯಾರ್ಥಿನಿಯರು ತಲೆ ಮುಚ್ಚುವುದರಿಂದ ಹಿಂದು ಧರ್ಮಕ್ಕೆ ಯಾವ ಅಪಾಯವೂ ಇಲ್ಲ.ಅದು ಹಿಂದು ಮುಸ್ಲಿಂ ಸಮಸ್ಯೆಯೂ ಅಲ್ಲ.ಮಹಿಳೆಯರು ತಲೆ ಮುಚ್ಚುವ ಶಾಲು ದರಿಸಿ ಬಂದರೆ ಪುರುಷರು ಕೇಸರಿ ಧರಿಸಿ ಬರುತ್ತೇವೆ ಎಂಬ ವಾದವೇ ಇಲ್ಲಿ ಸಮಸ್ಯೆಯ ಮೂಲ.ಅಧಿಕಾರ ಹಿಡಿಯಲು ಹಿಂದು ಮುಸ್ಲಿಂ ಎಂಬ ಭಾವನಾತ್ಮಕ ಅಸ್ತ್ರವನ್ನ ಮಾತ್ರ ಬತ್ತಳಿಕೆಯಲ್ಲಿಟ್ಟು ರಾಜಕಾರಣ ಮಾಡುವ ಪಕ್ಷ ಈ ಸಮಸ್ಯೆಯನ್ನು ಉಲ್ಬಣ ಗೊಳಿಸಿದೆ.
ಈಗ ಪ್ರಕರಣ ಕೋರ್ಟಲ್ಲಿ ಇರುವುದರಿಂದ ರಾಜಕಾರಣಿಗಳು ಹಸ್ತಕ್ಷೇಪ ಮಾಡದೇ ಇದನ್ನು ನ್ಯಾಯಯುತವಾಗಿ ಪರಿಹರಿಸಲು ಬಿಟ್ಟು ಬಿಡ ಬೇಕು. ಇಲ್ಲಿ ಕೇಸರಿ ,ಕಪ್ಪು ವರ್ಣ ವಿವಾದದ ವಸ್ತುವೇ ಅಲ್ಲ. ಹಿಜಾಬ್ ವರ್ಣ ಕೇಸರಿ ಇರಬೇಕೆಂದರೆ ಅದೂ ಸಮ್ಮತಾರ್ಹ.ಅಂದಹಾಗೆ ಈ ತಲೆ ಮುಚ್ಚುವ ಪದ್ದತಿ ಮುಸ್ಲಿಂ ಮಹಿಳೆಯರಿಗೆ ಮಾತ್ರ ಇರುವ ರೂಡಿಯೂ ಅಲ್ಲ.ಹಿಂದೂ ಮಹಿಳೆಯರೂ ಸಿಖ್ ಪುರುಷರೂ ಕ್ರೈಸ್ತ ಭಗನಿಯರೂ ತಲೆ ಮುಚ್ಚಿ ಕೊಳ್ಳುತ್ತಾರೆ .ನಾಗರಿಕತೆ ಬೆಳೆದಂತೆ ಕೆಲವರು ಇದನ್ನು ಪಾಲಿಸದಿದ್ದರೂ ಧರ್ಮಬೀರುಗಳು ಇದನ್ನು ಬಿಡಲಾಗದ ಒಂದು ಆಚಾರವಾಗಿ ಈಗಲೂ ಹೆಚ್ವಿನ ಸಂಖ್ಯೆಯಲ್ಲಿ ಪಾಲಿಸುತ್ತಲೇ ಬಂದಿದ್ದಾರೆ.
ಇಲ್ಲಿ ಹಿಂದು ಮುಸ್ಲಿಂ ಮುಖಂಡರು ಈಗ ಉದ್ಭವಿಸಿದ ಹಿಜಾಬ್ ಪ್ರಕರಣವನ್ನು ದೊಡ್ಡ ಸಮಸ್ಯೆಯಾಗದಂತೆ ನೋಡಿ ಕೊಳ್ಳಬೇಕಾಗಿದೆ. ಶಿಕ್ಷಣದಲ್ಲಿ ತೀರಾ ಹಿಂದುಳಿದ ಮುಸ್ಲಿಂ ಮಹಿಳೆಯರು ಈಗ ಎಲ್ಲಾ ಅಡೆತೆಡೆಗಳನ್ನು ಮೆಟ್ಟಿ ನಿಂತು ಕಲಿಯಲು ಮುಂದೆ ಬರುತ್ತಿರುವಾಗ ಅವರನ್ನು ನಿರುತ್ಸಾಹ ಪಡಿಸುವುದು ದೇಶವನ್ನು ಹಿಂದಕ್ಕೆ ತಳ್ಳುವಂತಹ ಪ್ರಕ್ರಿಯೆಯಾಗಿದೆ. ದೇಶದ ಪ್ರಧಾನಿಗಳು ಈ ಹಿಂದೆ ನೀಡಿದ ಹೇಳಿಕೆಗಳನ್ನು ಕಾರ್ಯರೂಪಕ್ಕೆ ತರಬೇಕಾದ ಅವರ ಪಕ್ಷದವರೇ ಅವರ ಮಾತಿಗೆ ವಿರುದ್ದವಾಗಿ ನಡೆಯುತ್ತಿರುವುದು ಇಲ್ಲಿ ಎದ್ದು ಕಾಣುತ್ತಿದೆ. ಎರಡನೇ ಅವಧಿಗೆ ಅವರು ಪ್ರಧಾನಿಯಾದಾಗ ದೇಶದ ಅತೀ ದೊಡ್ಡ ಅಲ್ಪ ಸಂಖ್ಯಾತ ಮುಸ್ಲಿಮರನ್ನು ಇನ್ನೂ ವಿಶ್ವಾಸಕ್ಕೆ ತೆಗೆದು ಕೊಳ್ಳಲು ನಾವು ವಿಫಲರಾಗಿದ್ದೇವೆ ಎಂದಿದ್ದರು.
ಅದೇ ರೀತಿ ಮುಸ್ಲಿಮರ ಒಂದು ಕೈಯಲ್ಲಿ ಕುರಾನ್ ಇನ್ನೊಂದು ಕೈಯ್ಯಲ್ಲಿ ಕಂಪ್ಯುಟರ್ ಕೊಡಿಸುತ್ತೇನೆ ಎಂದಿದ್ದರು. ಈಗ ಕುರಾನಿನ ಆಶಯದಂತೆ ನೀಟಾಗಿ ಮಾನ ಮುಚ್ವುವ ಶಾಲು ಧರಿಸಿ ಕಂಪ್ಯೂಟರ್ ಹಿಡಿದು ಮುಸ್ಲಿಂ ಮಹಿಳೆಯರು ಶಾಲೆಗೆ ಬರುವಾಗ ಅವರಿಗೆ ಶಾಲೆಯ ಗೇಟು ಬಂದ್ ಮಾಡುವುದು ಎಷ್ಟೊಂದು ದೊಡ್ಡ ಅಪರಾಧ! ಅದೇ ರೀತಿ ಮುಸ್ಲಿಂ ಮಹಿಳೆಯರ ಬಗ್ಗೆ ಬಹಳ ಕಾಳಜಿ ವಹಿಸಿ ತ್ರಿವಳಿ ತಲಾಕ್ ನ್ನು ನಿಷೇಧಿಸುವ ಮೂಲಕ ಅವರನ್ನು ಸಬಲೀಕರಣ ಗೊಳಿಸಲಾಗಿದೆ ಎಂದು ಚುನಾವಣಾ ಪ್ತಚಾರ ಮಾಡಿ ಮುಸ್ಲಿಂ ಮಹಿಳೆಯರ ಮತ ಗಿಟ್ಟಿಸಿ ಕೊಂಡ ಮೋದಿಯವರು ಈಗ ಈ ಹಿಜಾಬ್ ವಿಚಾರದಲ್ಲಿ ಮದ್ಯೆ ಪ್ರವೇಶ ಮಾಡಿ ಮುಗ್ಗ ವಿಧ್ಯಾರ್ಥಿನಿಯರ ಶಿಕ್ಷಣಕ್ಕೆ ಉತ್ತೇಜನ ಕೊಡುವ ಕಾರ್ಯಕ್ಕೆ ಮುಂದಾಗ ಬೇಕಿದೆ. ಅದೂ ಅಲ್ಲದೆ ಈ ಹಿಜಾಬ್ ಗೆ ಅವಕಾಶ ಇಲ್ಲದ ಕಡೆ ಸಾವಿರಾರು ಮಹಿಳೆಯರು ಈಗಲೂ ವಿದ್ಯೆಯಿಂದ ವಂಚಿತರಾಗಿ ಅರ್ಧದಲ್ಲೆ ಶಾಲೆಯನ್ನು ಮೊಟಕು ಗೊಳಿಸುತ್ತಿರುವುದು ನಮ್ಮ ಕಣ್ಣು ತೆರೆಸ ಬೇಕಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.