(www.vknews.in) ; ಒಂದು ಬಾರಿ ಲಕ್ಕಿ ಡ್ರಾ ಮೂಲಕ ವಿಜೇತರಾಗುವುದನ್ನು ಅದೃಷ್ಟವಂತ ಅಥವಾ ಭಾಗ್ಯವಂತ ಅನ್ನಬಹುದು. ಆದರೆ ಇಲ್ಲೊಬ್ಬರಿಗೆ ಮೂರು ಬಾರಿ ಅದೃಷ್ಟ ಖುಲಾಯಿಸಿದ್ದು ಅಧ್ಭುತವೇ ಸರಿ.
ಕೇರಳದ ಸುನೀಲ್ ಶ್ರೀಧರ್ ಎಂಬವರಿಗೆ ದುಬೈಯ ಮಿಲ್ಲೇನಿಯಂ ಮಿಲಿಯನೇರ್ ಡ್ಯೂಟಿ ಫ್ರೀ ಲಕ್ಕೀ ಡ್ರಾದಲ್ಲಿ ಮೊನ್ನೆ 7 ಕೋಟಿ ವಿಜೇತರಾಗಿದ್ದಾರೆ.
ಈ ಹಿಂದೆ ಅಂದರೆ 2019 ಸೆಪ್ಟೆಂಬರ್ ನಲ್ಲಿ ಒಂದು ದಶಲಕ್ಷ ಯು. ಎಸ್ ಡಾಲರ್ ವಿಜೇತರಾಗಿದ್ದರು. 2020 ಫೆಬ್ರುವರಿ ತಿಂಗಳಲ್ಲಿ ರೆಂಜ್ ರೋವರ್ ಕಾರ್ ವಿಜೇತರಾಗಿದ್ದರು.
ಇದೀಗ ದುಬೈಯ ಡ್ಯೂಟಿ ಫ್ರೀ ಇತಿಹಾಸದಲ್ಲಿ ಎಂಟನೇ ಬಾರಿ ಒಬ್ಬರೇ 2,3 ಬಾರಿ ಅದೃಷ್ಟಶಾಲಿಯಾಗಿದ್ದು ವಿಶೇಷವೇ ಸರಿ ಎಂದು ಡ್ಯೂಟಿ ಫ್ರೀ ಸಂಸ್ಥೆ ತಿಳಿಸಿದೆ.
ಅಬುಧಾಬಿಯಲ್ಲಿ ನೆಲೆಸಿರುವ 55 ವರ್ಷ ವಯಸ್ಸಿನ ಸುನಿಲ್ ಶ್ರೀಧರ್ ರವರು ಸ್ವಂತ ಆನ್ಲೈನ್ ಟ್ರೇಡಿಂಗ್ ಸಂಸ್ಥೆಯನ್ನು ಹೊಂದಿದ್ದಾರೆ.
ವರದಿ :ಸಫ್ವಾನ್ ಚಿಗುರೆಲೆ ಕೂರತ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.