ಪ್ರಾಥಮಿಕ ವರದಿ ಪ್ರಕಾರ ಜನಾಂಗೀಯತೆ ಹಿಂಸಾಚಾರಕ್ಕೆ ಕಾರಣ..
ವಾಷಿಂಗ್ಟನ್ (ವಿಶ್ವ ಕನ್ನಡಿಗ ನ್ಯೂಸ್) : ಅಮೆರಿಕದ ನ್ಯೂಯಾರ್ಕ್ ನ ಸೂಪರ್ ಮಾರ್ಕೆಟ್ ನಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಹಾಗು ಹಲವಾರು ಜನರು ಗಾಯಗೊಂಡಿದ್ದಾರೆ. ಬಫಲೋದ ಸೂಪರ್ ಮಾರ್ಕೆಟ್ ನಲ್ಲಿ ಸೈನಿಕನ ವೇಷ ಧರಿಸಿದ ಬಂದೂಕುಧಾರಿಯೊಬ್ಬ ಜನರ ಮೇಲೆ ಗುಂಡು ಹಾರಿಸಿದ್ದಾನೆ.
ಪೊಲೀಸರ ಪ್ರಕಾರ, ದಾಳಿಕೋರನು ಮೊದಲು ಸೂಪರ್ ಮಾರ್ಕೆಟಿನ ಒಳಗೆ ಪ್ರವೇಶಿಸಿದನು, ನಂತರ ಹೊರಬಂದು ವಾಹನಗಳ ಪಾರ್ಕಿಂಗ್ ಸ್ಥಳದ ಬಳಿ ಬಂದು ಜನರ ಮೇಲೆ ಗುಂಡು ಹಾರಿಸಿದನು. ಮೃತಪಟ್ಟವರಲ್ಲಿ ಒಬ್ಬರು ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಅವರು ಸಂಸ್ಥೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದೆ. ಏತನ್ಮಧ್ಯೆ, ಬಫಲೋ ನಗರದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಸೂಪರ್ ಮಾರ್ಕೆಟ್ ಇರುವ ಪ್ರದೇಶವು ಹೆಚ್ಚಿನ ಸಂಖ್ಯೆಯ ಕಪ್ಪು ಜನರಿಗೆ ನೆಲೆಯಾಗಿದೆ. ಪ್ರಾಥಮಿಕ ವರದಿ ಪ್ರಕಾರ ಜನಾಂಗೀಯತೆಯು ಹಿಂಸಾಚಾರಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.