ಹುಬ್ಬಳ್ಳಿ (ವಿಶ್ವ ಕನ್ನಡಿಗ ನ್ಯೂಸ್) : ಪತ್ರಿಕಾರಂಗ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತ ಜೀವನವೇ ಕಳೆಯುತ್ತಿದ್ದರೂ, ಎಲ್ಲ ಸಂಕಷ್ಟಗಳನ್ನು ಸಹಿಸಿ, ಮಕ್ಕಳ ನಾಳೆಯ ಒಳ್ಳೆಯ ದಿನಕ್ಕಾಗಿ ಎದುರು ನೋಡುತ್ತಿರುವ ಕುಟುಂಬದ ಮಗಳು ಪ್ರಸಕ್ತ ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಪಡೆದು A+ ಗ್ರೇಡ್ ನಲ್ಲಿ ಪಾಸಾಗಿ ಹಿರಿಮೆ ಮೆರೆದಿದ್ದಾಳೆ.
ಧಾರವಾಡದ ಹೊಸ ಯಲ್ಲಾಪೂರ ನಿವಾಸಿಯಾದ ಅಫ್ಝಲಖಾನ ಹಾಗೂ ಯಾಸ್ಮೀನ ಪಠಾಣ ದಂಪತಿಗಳ ಪುತ್ರಿಯಾದ ಸೀಫಾಖಾನುಮ್ ಎ. ಪಠಾಣ ಕೆಸಿ ಪಾರ್ಕ್ ಹತ್ತಿರದ ಪ್ರೇಜೆಂಟೇಷನ್ ಇಂಗ್ಲೀಷ ಮೇಡಿಯಂ ಗರ್ಲ್ಸ್ ಹೈಸ್ಕೂಲ್ ನಲ್ಲಿ ಶ್ರದ್ಧೆಯಿಂದ ಅಭ್ಯಸಿಸಿ ಹತ್ತನೇ ತರಗತಿಯ 2022 ರ ಪರೀಕ್ಷೆಯಲ್ಲಿ 597 ಅಂಕ ಪಡೆದು ಎ+ ಗ್ರೇಡ್ ನಲ್ಲಿ ತೇರ್ಗಡೆಯಾಗಿ ಶಾಲೆಯ ಹಾಗೂ ಕುಟುಂಬದ ಕೀರ್ತಿ ಹೆಚ್ಚಿಸಿದ್ದಾಳೆ.
ಸೀಫಾಖಾನುಮ್ ತಂದೆ ಅಫ್ಝಲಖಾನ್ ಕಳೆದ 23 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಜೆ ದರ್ಪಣ ಪತ್ರಿಕಾಲಯದ ಸಿಬ್ಬಂದಿಯಾಗಿ, ಈ ಸಂಜೆ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆಯಲ್ಲಿ ಪತ್ರಿಕಾ ವಿತರಕನಾಗಿ ಕಾರ್ಯ ನಿರ್ವಹಿಸುತ್ತಾ, ಬಡತನದ ಬವಣೆ ತನಗಿರಲಿ ಆದರೆ ತನ್ನ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕೆಂದು ಹಗಲಿರುಳು ಶ್ರಮಿಸುತ್ತಿದ್ದರು. ಮಗಳ ಫಲಿತಾಂಶದಿಂದ ಹರ್ಷಿತನಾಗಿ, ಮಕ್ಕಳ ಮಾದರಿ ಹಾಗೂ ಸಮೃದ್ಧ ಜೀವನ ಕಲ್ಪಿಸಲು ನಾವು ದುಡಿಯುತ್ತೇವೆ ನಿಜ. ಆದರೆ, ಮಕ್ಕಳು ಉತ್ತಮ ಫಲಿತಾಂಶದ ಮೂಲಕ ಹೆತ್ತವರನ್ನು ಸಂತುಷ್ಟಗೊಳಿಸಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.