(www.vknews.in): ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಗೃಹರಕ್ಷಕರಿಗೆ ಪೂರ್ವಭಾವಿ ಉಚಿತ ಯೋಗ ತರಬೇತಿ ಶಿಬಿರ ದಿನಾಂಕ 09-06-2022ನೇ ಗುರುವಾರದಂದು ನಗರದ ಪೋಲಿಸ್ ಪೆರೇಡ್ ಮೈದಾನದಲ್ಲಿ ಉದ್ಘಾಟನೆಗೊಳ್ಳಲಿದೆ. ಖ್ಯಾತ ಯೋಗ ಗುರು ಯೋಗ ರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಅವರ ನೇತ್ರತ್ವದಲ್ಲಿ ಈ ಶಿಬಿರ ಜರುಗಲಿದೆ. ದಿನಾಂಕ 10 ರಿಂದ 15ರವರೆಗೆ ಆನ್ಲೈನ್ ತರಬೇತಿ ಬೆಳಿಗ್ಗೆ 5:30 ರಿಂದ 6:30ರ ವರೆಗೆ ನಡೆಯಲಿದೆ. ಗೂಗಲ್ ಮೀಟ್ ಮುಖಾಂತರ ಅಂತರ್ಜಾಲದ ಕೊಂಡಿ ಬಳಸಿ ಈ ತರಬೇತಿ ಪಡೆದುಕೊಳ್ಳಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ತಿಳಿಸಿದ್ದಾರೆ. ದಿನಾಂಕ 16 ರಿಂದ 20 ರವರೆಗೆ 5 ದಿನಗಳ ಕಾಲ ನಗರದ ಮೇರಿಹಿಲ್ನಲ್ಲಿರುವ ಗೃಹರಕ್ಷಕದಳದ ಕಛೇರಿಯಲ್ಲಿ ಬೆಳಿಗ್ಗೆ 7 ರಿಂದ 8 ರವರೆಗೆ ಉಚಿತ ಪ್ರಾಯೋಗಿಕ ತರಬೇತಿ ನಡೆಯಲಿದೆ.
ಒಟ್ಟು 12 ದಿನಗಳ ಈ ಹೈಬ್ರಿಡ್ ತರಬೇತಿಯಲ್ಲಿ ಮೊದಲ 6 ದಿನ ಆನ್ಲೈನ್ ಮತ್ತು ಕೊನೆ 6 ದಿನ ಆಫ್ಲೈನ್ ತರಬೇತಿ ನಡೆಯಲಿರುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆಸಕ್ತ ಗೃಹರಕ್ಷಕರು ಮತ್ತು ಪೌರರಕ್ಷಣಾದಳದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಈ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಯೋಗ ಗುರು ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಅವರನ್ನು ಸಂಪರ್ಕಿಸಲು ಕೋರಲಾಗಿದೆ ಮೊಬೈಲ್ ನಂಬರ್ : 9448394987. ದಿನಾಂಕ 21-06-2022 ನೇ ಮಂಗಳವಾರದಂದು ತರಬೇತಿ ಪಡೆದ ಎಲ್ಲಾ ಗೃಹರಕ್ಷಕರು ಮತ್ತು ಪೌರರಕ್ಷಣಾ ಕಾರ್ಯಕರ್ತರು ಆಯುಷ್ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.