ಘಟನೆಯಲ್ಲಿ ಶಾಮೀಲಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ – ಹಾರಿಸ್ ಕದಿಕಡ್ಕ
ಸುಳ್ಯ (www.vknews.in) : ಜಾಲ್ಸೂರಿನ ವಿನೋಬಾ ನಗರ ವಿವೇಕಾನಂದ ಖಾಸಗಿ ಶಾಲೆಯಲ್ಲಿದ್ದ ಬಿಸಿಯೂಟದ ಹಳೆಯ ಕೊಳೆತ ಅಕ್ಕಿಯನ್ನು ಪಡಿತರ ಕೇಂದ್ರಕ್ಕೆ ಸಾಗಿಸಿ ಅಲ್ಲಿಂದ ಒಳ್ಳೆಯ ಅಕ್ಕಿಯನ್ನು ಶಾಲೆಗೆ ಸಾಗಿಸಲು ಯತ್ನಿಸಿದ ಘಟನೆಯೂ ಖಂಡನಾರ್ಹ, ಸಂಬಂದ ಪಟ್ಟ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ಡಿಪಿಐ ಜಾಲ್ಸೂರು ಬೂತ್ ಸಮಿತಿ ಕಾರ್ಯದರ್ಶಿ ಹಾರಿಸ್ ಕದಿಕಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಕಿ ಕೊಳೆತರೆ ಅಥವಾ ಬಳಸಲು ಅಯೋಗ್ಯವಾದರೆ ಅದನ್ನು ಬಿಸಾಡುವುದು ಅನಿವಾರ್ಯ, ಅದು ಬಿಟ್ಟು ಅದನ್ನು ಶಾಲಾ ಮಕ್ಕಳಿಗಾಗಲಿ ಅಥವಾ ಗ್ರಾಮಸ್ಥರಿಗಾಗಲಿ ವಿತರಣೆ ಮಾಡುವುದು ತಪ್ಪು.ಈ ರೀತಿಯಾಗಿ ಪಡಿತರ ಅಂಗಡಿಯಿಂದ ಅದಲು ಬದಲಾವಣೆ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಹಾಗೂ ಅಕ್ಕಿ ಈ ರೀತಿಯಲ್ಲಿ ಕೊಳೆಯುವಷ್ಟು ಸಮಯ ದಾಸ್ತಾನು ಇಡಲು ಕಾರಣವೇನು ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸಬೇಕು
ಅದಲ್ಲದೇ ಅಕ್ಕಿಯನ್ನು ವಾಹನಕ್ಕೆ ತುಂಬಿಸಲು ಮತ್ತು ಕೆಳಗಿಳಿಸಲು ಅಪ್ರಾಪ್ತ ಶಾಲಾ ಮಕ್ಕಳನ್ನು ಬಳಸಿರುವುದು ಬಾಲ ಕಾರ್ಮಿಕ ಕಾನೂನಿನಡಿಯಲ್ಲಿ ಇನ್ನೊಂದು ದೊಡ್ಡ ತಪ್ಪು ಹಾಗೂ ಎಳೆಯ ಮಕ್ಕಳ ಮನಸ್ಸಿನಲ್ಲೂ ಈ ರೀತಿಯ ವಂಚನೆ ಮಾಡಲು ಪ್ರೇರೇಪಿಸಿದಂತಾಗುತ್ತದೆ.
ಈ ಹಿಂದೆಯೂ ಈ ರೀತಿಯ ಘಟನೆ ನಡೆದಿರುವ ಸಾಧ್ಯತೆ ಗಳಿವೆ,ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.