ವಾಷಿಂಗ್ಟನ್ (ವಿಶ್ವ ಕನ್ನಡಿಗ ನ್ಯೂಸ್) : ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೈಕಲ್ ನಿಂದ ಕೆಳಗೆ ಬಿದ್ದಿದ್ದಾರೆ. ಬೈಸಿಕಲ್ ನಿಂದ ಇಳಿಯುವಾಗ ಅವರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ಅವರೊಂದಿಗಿದ್ದ ಭದ್ರತಾ ಸಿಬ್ಬಂದಿಗಳು ಎದ್ದೇಳಲು ಸಹಾಯ ಮಾಡಿದರು. ಅವರಿಗೆ ಯಾವುದೇ ಗಾಯಗಳಾಗಿಲ್ಲ.
ನಿಯಂತ್ರಣ ತಪ್ಪಲು ಕಾರಣವೆಂದರೆ, ಅವರ ಶೂ ಸೈಕಲ್ ನ ಪೆಡಲ್ ಒಳಗೆ ಸಿಕ್ಕಿಹಾಕಿಕೊಂಡಿತು. ಸೆವೆನ್ ಬೀಚ್ ಬಳಿಯ ಸ್ಟೇಟ್ ಪಾರ್ಕ್ನಲ್ಲಿ ಅವರು ತಮ್ಮ ಪತ್ನಿ ಜಿಲ್ ಬೈಡನ್ ಅವರೊಂದಿಗೆ ಸೈಕ್ಲಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅವರ ವೈದ್ಯರು ಸ್ಪಷ್ಟಪಡಿಸಿದರು.
America President Biden lost control on cycle while trying to get off a bike. pic.twitter.com/F7lVHXS3KF — Anuj Kumar Bajpai (@AnujBajpai_) June 18, 2022
America President Biden lost control on cycle while trying to get off a bike. pic.twitter.com/F7lVHXS3KF
— Anuj Kumar Bajpai (@AnujBajpai_) June 18, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.