ಬಂಟ್ವಾಳ :ಮಜ್ಲಿಸ್ ಗಾಣೆಮಾರ್ ಸಂಸ್ಥೆಯ ಅಧೀನದಲ್ಲಿರುವ ಮಜ್ಲಿಸ್ ವಿಂಗ್ ಇದರ ವಾರ್ಷಿಕ ಸಭೆಯು ಇತ್ತೀಚಿಗೆ ಸಂಸ್ಥೆಯ ಚೇರ್ಮ್ಯಾನ್ ಹಾಫಿಲ್ ಅಬ್ದುಲ್ ಮಜಿದ್ ಫಾಳಿಲಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಸ್ಥೆಯ ಮೆನೇಜರ್ ಸದ್ದಾಂ ಮಾಸ್ಟರ್ ಉದ್ಘಾಟನೆಗೈದರು. ವಾರ್ಷಿಕ ಲೆಕ್ಕ ಪತ್ರವನ್ನು ಹಮೀದ್ ವರಕೋಡಿ ಮಂಡಿಸಿ ವಾರ್ಷಿಕ 2 ಲಕ್ಷದಷ್ಟು ರಿಲೀಫ್ ಸೇವನೆಯ ಬಗ್ಗೆ ವಿವರಣೆ ನೀಡಿದರು.
ನೂತನ ಅಧ್ಯಕ್ಷರಾಗಿ ಉಮರ್ ಫಾರೂಕ್ ಹನಿಫಿ ಬಜ್ಪೆ, ಪ್ರಧಾನ ಕಾರ್ಯಧರ್ಶಿ ಯಾಗಿ ಮುಹಮ್ಮದ್ ಶರೀಫ್ ಬಡಕಬೈಲ್, ಕೋಶಧಿಕರಿಯಾಗಿ ಅಬ್ದುಲ್ ಜಲೀಲ್ ಮೊಗರು, ಉಪಾಧ್ಯಕ್ಷರುಗಳಾಗಿ ಸಿರಾಜುದ್ದೀನ್ ಅಡ್ಡೂರು, ಮುಹಮ್ಮದ್ ನೌಫಲ್ ದೆಮ್ಮಲೆ, ಜೊತೆ ಕಾರ್ಯದರ್ಶಿಯರಾಗಿ ಮುಹಮ್ಮದ್ ಇಕ್ಬಾಲ್ ವರಕೋಡಿ, ಹಂಝ ಟಿ,ಹೆಚ್ ಕಲಾಯಿ ತಾಳಿಪ್ಪಾಡಿ, ಹಾಗೂ ಬುರ್ದಾ ಕನ್ವಿರರಾಗಿ ಮುಹಮ್ಮದ್ ಅಮ್ಮುoಜೆ, ಅಬ್ದುಲ್ ಹಮೀದ್ ವರಕೋಡಿ ಯವರನ್ನು ಆಯ್ಕೆ ಮಾಡಲಾಯಿತು. ಮಜ್ಲಿಸ್ ಪಬ್ಲಿಕ್ ಸ್ಕೂಲ್ ಇದರ ಮ್ಯಾನೇಜರ್ ಎಂ.ಎ ಸಿದ್ಧಿಖ್,ಬಜ್ಪೆ ಸ್ವಾಗತಿಸಿ ಧನ್ಯವಾದವಿತ್ತರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.