ಕಾಟಿಪಳ್ಳ (www.vknews.in) : ಇತ್ತೀಚೆಗೆ ಕಾಟಿಪಳ್ಳ ಪ್ರದೇಶದ ಮದರಸ ವಿಧ್ಯಾರ್ಥಿ ಶಯಾನ್ ಮೇಲೆ ದುಷ್ಕರ್ಮಿಗಳು ರಾತ್ರಿ ವೇಳೆ ಹಲ್ಲೆ ನಡೆಸಿ ಎಳೆದಾಡಿದ್ದು,ಸ್ಥಳೀಯವಾಗಿ ದುಷ್ಕರ್ಮಿಗಳ ಈ ಕೃತ್ಯ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ದಂತೆ ಕಾಣುತ್ತದೆ. ಸುರತ್ಕಲ್ ಏರಿಯಾದಲ್ಲಿ ಈ ಹಿಂದೆ ಕೂಡಾ ಇಂತಹುದೇ ಕೆಲವು ಪ್ರಕರಣಗಳು ನಡೆದಿರುತ್ತದೆ
ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಬೇಕು. ಈ ಕೃತ್ಯವನ್ನು ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದ ಜನರನ್ನು ಮತೀಯ ಸಂಕೇತಗಳ ಮೇಲೆ ದಾಳಿ ನಡೆಸುವ ಮೂಲಕ ಭಯ ಸೃಷ್ಟಿಸುವ ಚಾಳಿ ಕೇವಲ ಹಿಜಾಬ್, ಆಝಾನ್ ಮೂಲಕ ನಡೆಸುವ ಪ್ರಯತ್ನಕ್ಕೆ ಮಾತ್ರಾ ಸೀಮಿತವಾಗಿಲ್ಲ, ಅದರ ಮುಂದುವರಿದ ಭಾಗವೇ,ಮದರಸ ವಿಧ್ಯಾರ್ಥಿ ಗಳ ಮೇಲಿನ ಹಲ್ಲೆ ಆಗಿರುತ್ತದೆ ಎಂದು ಭಾವಿಸಬೆಕಾಗುತ್ತದೆ. ಮತೀಯ ಉದ್ವಿಗ್ನತೆ ಸೃಷ್ಟಿಸುವ ಹುನ್ನಾರ ಇದಾಗಿರುತ್ತದೆ. ಇದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಬೇಕಿದೆ. ವಿದ್ಯಾರ್ಥಿ ಶಯಾನ್ ಭೇಟಿ ಸಂದರ್ಭದಲ್ಲಿ ಅಬ್ದುಲ್ ಜಲೀಲ್ ಕೃಷ್ಣಾಪುರ(ಅದ್ದು) , ಆಯಾಝ್, ಸಿ. ಎಂ.ಮುಸ್ತಾಫಾ, ಅಹಮದ್ ಬಾವ ಬಜಾಲ್, ಹಿದಾಯತ್ ಸುರತ್ಕಲ್ ಉಪಸ್ತಿತರಿದ್ದರು.
ಕೆ.ಅಶ್ರಫ್. ಅಧ್ಯಕ್ಷರು. ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.