(ವಿಶ್ವ ಕನ್ನಡಿಗ ನ್ಯೂಸ್) : ನ್ಯೂಜೆರ್ಸಿಯ ಅಂತಾರಾಜ್ಯ ಹೆದ್ದಾರಿಯಲ್ಲಿ ವಿಭಿನ್ನ ರೀತಿಯ ಪಟಾಕಿ ಪ್ರದರ್ಶನ ನಡೆಯಿತು. ಪಟಾಕಿ ಸಾಗಿಸುತ್ತಿದ್ದ ದೊಡ್ಡ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಲಾರಿಯಲ್ಲಿದ್ದ ಎಲ್ಲಾ ವಿಧದ ಪಟಾಕಿಗಳು ಒಟ್ಟಿಗೆ ಸಿಡಿಯತೊಡಗಿದವು. ಹೆದ್ದಾರಿಯಲ್ಲಿನ ಪ್ರಯಾಣಿಕರು ಯಾವುದೇ ವೆಚ್ಚ ಅಥವಾ ದೈಹಿಕ ಶ್ರಮವಿಲ್ಲದೆ ಪಟಾಕಿಗಳನ್ನು ಆನಂದಿಸಿದರು.
ಸರಿಸುಮಾರು 10,000 ಪೌಂಡ್ಗಳ (4,500 ಕಿಲೋಗ್ರಾಂಗಳಿಗಿಂತ ಹೆಚ್ಚು) ಪಟಾಕಿಗಳಿಂದ ತುಂಬಿದ ಟ್ರಾಕ್ಟರ್ ಟ್ರೈಲರ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ರಾತ್ರಿ 10:30ಕ್ಕೆ ಘಟನೆ ನಡೆದಿದ್ದು, ಟ್ರಕ್ನ ಟೈರ್ಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಲಾರಿ ಚಾಲಕ ಗಮನಿಸಿ ಬೆಂಕಿ ಹರಡಿ ಪಟಾಕಿ ಸಿಡಿಯುವ ಮುನ್ನವೇ ಆತನು ಟ್ರಕ್ ನಿಲ್ಲಿಸಿ ದೂರ ಹೋಗಿದ್ದಾನೆ.
ಪಟಾಕಿ ಸಿಡಿಯುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಳಗಿನ ಜಾವ ಐದು ಗಂಟೆಯವರೆಗೂ ಪಟಾಕಿ ಸಿಡಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಯಾರಿಗೂ ಗಾಯಗಳಾಗಿಲ್ಲ ಎಂದು ನ್ಯೂಜೆರ್ಸಿ ಪೊಲೀಸರು ತಿಳಿಸಿದ್ದಾರೆ.
VIDEO: A tractor-trailer carrying a large amount of fireworks caught fire overnight, igniting the #fireworks – shutting down parts of I-287 in #NewJersey. (Courtesy: Albin Forgiarini) More Information – https://t.co/i2bwxqt1Rk pic.twitter.com/DbIsJV9YuE — News12NJ (@News12NJ) June 27, 2022
VIDEO: A tractor-trailer carrying a large amount of fireworks caught fire overnight, igniting the #fireworks – shutting down parts of I-287 in #NewJersey. (Courtesy: Albin Forgiarini) More Information – https://t.co/i2bwxqt1Rk pic.twitter.com/DbIsJV9YuE
— News12NJ (@News12NJ) June 27, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.