ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದೈವಜ್ಞ ಬ್ರಾಹ್ಮಣರ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ದಶಮಾನೋತ್ಸವ ಪ್ರಯುಕ್ತ ರಕ್ತದಾನ ಶಿಬಿರವು ರವಿವಾರ ( 10-07-2022) ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆಯಿತು.
ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಸಮಾಜ ಸೇವಕ, ನೂತನ್ ಗ್ಯಾಸ್ ಡೀಲರ್ ಮಾಲಕ ನಾಗರಾಜ್ ಶೇಟ್ ಅವರು ರಕ್ತದಾನ ಅತೀ ಶ್ರೇಷ್ಠ ದಾನವಾಗಿದ್ದು, ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಪ್ರಾಣ ಉಳಿಸ ಬಹುದು. ಇದರಿಂದ ರಕ್ತದಾನ ಮಾಡುವವರಿಗೂ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನುಡಿದರು.
ದೈವಜ್ಞ ಬ್ರಾಹ್ಮಣರ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಶ್ರೀಪಾದ್ ಶೇಟ್. ಗೌರವಾಧ್ಯಕ್ಷ ಅರುಣ್ ಶೇಟ್, ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಂ ಅಶೋಕ ಶೇಟ್. ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಸುಧಾಕರ್ ಶೇಟ್. ದೈವಜ್ಞ ಮಹಿಳಾ ಮಂಡಳಿಯ ಅಧ್ಯಕ್ಷೆ ಪುಷ್ಪ ಕೃಷ್ಣಾನಂದ ಶೇಟ್. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಅರುಣ ಜಿ ಶೇಟ್. ಚಿನ್ನ ಬೆಳ್ಳಿ ಸಂಘದ ಕಾರ್ಯದರ್ಶಿ ರವೀಂದ್ರ ಸಿ ಗೋಕರ್ಣಕರ್. ಯುವಕ ಮಂಡಳಿಯ ಅಧ್ಯಕ್ಷ ಗಣೇಶ ಶೇಟ್, ಇಂಡಿಯಾನ್ ರೆಡ್ ಕ್ರಾಸ್ ಸೊಸೈಟಿಯ ಪ್ರಮುಖರಾದ ಡಾ. ಪ್ರವೀಣ್ ಕುಮಾರ್ .ಡಾ. ಜೆ. ಎನ್ ಭಟ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.
ದೈವಜ್ಞ ಸೌರಭ ಪತ್ರಿಕೆಯ ಪ್ರಕಾಶಕ ರಾಜೇಂದ್ರಕಾಂತ ಶೇಟ್ ಹಾಗು ವಿಜಯಕಾಂತ್ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 90ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.