ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಪಾಕಿಸ್ತಾನಿ ವಲಸಿಗ, ತಲಾಬತ್ ಡೆಲಿವರಿ ರೈಡರ್ ಆಗಿರುವ ಅಬ್ದುಲ್ ಗಫೂರ್, ಜನನಿಬಿಡ ಟ್ರಾಫಿಕ್ ಜಂಕ್ಷನ್ ನಲ್ಲಿ ಬಿದ್ದಿದ್ದ ಎರಡು ಕಾಂಕ್ರೀಟ್ ಇಟ್ಟಿಗೆಗಳನ್ನು ತೆಗೆದು ಹೀರೊ ಆಗಿದ್ದರು. ಅವರ ಈ ಕೆಲಸವನ್ನು ಯಾರೋ ಒಬ್ಬರು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅಬ್ದುಲ್ ಗಫೂರ್ ಅಬ್ದುಲ್ ಹಕೀಮ್ ಅವರಿಗೆ ಭಾನುವಾರ ದುಬೈ ಕ್ರೌನ್ ಪ್ರಿನ್ಸ್ ಅವರು ಕರೆ ಮಾಡಿದ್ದಾರೆ.
ಸಾಮಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಾಶೀದ್ ಅಲ್ ಮಕ್ತೌಮ್ ಅವರ ಗಮನವನ್ನು ಸೆಳೆಯಿತು, ಸವಾರನ ತ್ವರಿತ ಆಲೋಚನೆಯನ್ನು ಶ್ಲಾಘಿಸಿದ ಅವರು ಈ ಉತ್ತಮ ಕಾರ್ಯ ಮಾಡಿದ ವ್ಯಕ್ತಿಯನ್ನು ಗುರುತಿಸಲು ಅವರ ಲಕ್ಷಾಂತರ ಸಾಮಾಜಿಕ ಮಾಧ್ಯಮ ಅನುಯಾಯಿಗಳಿಂದ ಸಹಾಯವನ್ನು ಕೋರಿದರು. ಸ್ವಲ್ಪ ಸಮಯದ ನಂತರ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅವರು “ಒಳ್ಳೆಯ ವ್ಯಕ್ತಿ” ಸಿಕ್ಕಿದ್ದಾರೆ, ನಾವು ಶೀಘ್ರದಲ್ಲೇ ಭೇಟಿಯಾಗುತ್ತೇವೆ ಎಂದು ಪೋಸ್ಟ್ ಮಾಡಿದರು.
ಭಾನುವಾರ ಅಬ್ದುಲ್ ಗಫೂರ್ ಅಬ್ದುಲ್ ಹಕೀಮ್ ಅವರಿಗೆ ಕರೆ ಮಾಡಿದ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅವರು ಕರೆ ಮಾಡಿದ್ದರು, ಈ ಬಗ್ಗೆ ಆಂಗ್ಲ ಮಾಧ್ಯಮದೊಂದಿಗೆ ಮಾತನಾಡಿದ ಅಬ್ದುಲ್ ಗಫೂರ್, ನನಗೆ ನನ್ನ ಕಿವಿಗಳನ್ನು ನಂಬಲಾಗಲಿಲ್ಲ. ಕರೆ ಬಂದಾಗ ನಾನು ಡೆಲಿವರಿಗಾಗಿ ಹೊರಗಿದ್ದೆ. ನಾನು ಮಾಡಿದ ಕಾರ್ಯಕ್ಕೆ ದುಬೈ ಕ್ರೌನ್ ಪ್ರಿನ್ಸ್ ನನಗೆ ಧನ್ಯವಾದ ಹೇಳಿದರು. ಅವರು ಇದೀಗ ದೇಶದಿಂದ ಹೊರಗಿದ್ದಾರೆ ಎಂದು ಅವರು ಹೇಳಿದರು ಮತ್ತು ಅವರು ಹಿಂತಿರುಗಿದ ತಕ್ಷಣ ನನ್ನನ್ನು ಭೇಟಿಯಾಗುವುದಾಗಿ ಭರವಸೆ ನೀಡಿದರು ಎಂದು ಹೇಳಿದ್ದಾರೆ.
ವೈರಲ್ ವೀಡಿಯೊದಲ್ಲಿ, ಕಾರುಗಳು ಮತ್ತು ಟ್ರಕ್ಗಳು ಒಂದರ ಹಿಂದೆ ಒಂದರಂತೆ ಹೋಗುತ್ತಿರುವಾಗ ಡೆಲಿವರಿ ರೈಡರ್ ಜಂಕ್ಷನ್ನಲ್ಲಿ ಕಾಯುತ್ತಿರುವುದನ್ನು ಕಾಣಬಹುದು. ಎಲ್ಲಾ ವಾಹನಗಳು ಹಾದುಹೋದ ನಂತರ, ಅವನು ತನ್ನ ಬೈಕಿಗೆ ಹಿಂತಿರುಗುವ ಮೊದಲು ಟ್ರಾಫಿಕ್ ಜಂಕ್ಷನ್ ನಲ್ಲಿ ಬಿದ್ದಿದ್ದ ಎರಡು ಕಾಂಕ್ರೀಟ್ ಇಟ್ಟಿಗೆಗಳನ್ನು ತೆಗೆದು ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿದನು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.