”ಒನ್ ಇಂಡಿಯಾ ಒನ್ ಫೇರ್” ಪ್ರಚಾರದ ಭಾಗವಾಗಿ ರಿಯಾಯಿತಿ ದರ..
ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಏರ್ ಇಂಡಿಯಾ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಯುಎಇಯಿಂದ ಭಾರತಕ್ಕೆ ವಿಮಾನ ಟಿಕೆಟ್ ದರದಲ್ಲಿ ರಿಯಾಯಿತಿ ಘೋಷಿಸಿದೆ. ಯುಎಇಯಿಂದ ಭಾರತಕ್ಕೆ ಟಿಕೆಟ್ ದರವನ್ನು 330 ದಿರ್ಹಮ್ಗಳಿಗೆ ಇಳಿಸಲಾಗಿದೆ. ದರ ಕಡಿತವು ಒನ್ ಇಂಡಿಯಾ ಒನ್ ಫೇರ್ ಪ್ರಚಾರದ ಭಾಗವಾಗಿದೆ.
ನೀವು ದುಬೈನಿಂದ ಬೆಂಗಳೂರು, ಕೊಚ್ಚಿ, ಕೋಝಿಕ್ಕೋಡ್, ದೆಹಲಿ, ಮುಂಬೈ, ಚೆನ್ನೈ, ಗೋವಾ, ಹೈದರಾಬಾದ್ ಮತ್ತು ಇಂದೋರ್ಗೆ 330 ದಿರ್ಹಮ್ಗಳಿಗೆ ಪ್ರಯಾಣಿಸಬಹುದು. ಶಾರ್ಜಾದಿಂದ ಕ್ಯಾಲಿಕಟ್ ಮತ್ತು ಅಬುಧಾಬಿಯಿಂದ ಮುಂಬೈ ದರಗಳು ಒಂದೇ ಆಗಿರುತ್ತವೆ. ಇನ್ನು ಈ ತಿಂಗಳ 21ರವರೆಗೆ ಈ ದರದಲ್ಲಿ ಟಿಕೆಟ್ ಖರೀದಿಸಬಹುದು. ಅಕ್ಟೋಬರ್ 15 ರವರೆಗೆ ನೀವು ಈ ಟಿಕೆಟ್ನೊಂದಿಗೆ ಪ್ರಯಾಣಿಸಬಹುದು. ನೇರ ವಿಮಾನಗಳಿಗೆ ಮಾತ್ರ ಈ ದರ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಇ ಹೊರತುಪಡಿಸಿ, ಕುವೈತ್, ಬಹ್ರೇನ್, ಓಮನ್, ಕತಾರ್ ಮತ್ತು ಸೌದಿ ಅರೇಬಿಯಾದಿಂದ ಒನ್ ಇಂಡಿಯಾ ಒನ್ ಏರ್ ಯೋಜನೆಯಡಿ ಕಡಿಮೆ ದರದಲ್ಲಿ ಪ್ರಯಾಣಿಸಲು ಸಾಧ್ಯ ಎಂದು ಏರ್ ಇಂಡಿಯಾ ಘೋಷಿಸಿದೆ. ಸೌದಿ ಅರೇಬಿಯಾದಿಂದ ಭಾರತಕ್ಕೆ ಟಿಕೆಟ್ ದರ 500 ರಿಯಾಲ್ ಆಗಿದೆ. ಒಮಾನ್ನಿಂದ ಭಾರತಕ್ಕೆ 36.1 ಓಮನ್ ರಿಯಾಲ್ ಮತ್ತು ಕುವೈತ್ನಿಂದ ಭಾರತಕ್ಕೆ 36.65 ಕುವೈತ್ ದಿನಾರ್ ಟಿಕೆಟ್ ದರ ಎಂದು ಏರ್ ಇಂಡಿಯಾ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ. ಹೆಚ್ಚಿನ ವಿವರಗಳಿಗೆ: http://www.airindia.in ತೆರೆದು ನೋಡಿ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.